ಬಂಟ್ವಾಳ: ಕಟೀಲು ಶ್ರೀದುರ್ಗಾಪರಮೇಶ್ವರಿ ತಾಯಿಯ ಅನುಗ್ರಹದಿಂದ, ಜನ ಸೇವೆಯೇ ಜನಾರ್ಧನ ಸೇವೆ ಎಂಬ ಉದ್ದೇಶವನ್ನಿಟ್ಟುಕೊಂಡು ಯುವ ಮನಸ್ಸುಗಳ ಸೇವಾ ಮನೋಭಾವನೆಯಿಂದ ಕಳೆದ 56 ತಿಂಗಳ ಹಿಂದೆ ಹುಟ್ಟಿಕೊಂಡ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ದ.ಕ ಇಂದು ತನ್ನ 57ನೇ ತಿಂಗಳ ಸೇವಾ ಪಯಣದಲ್ಲಿ ಅಶಕ್ತರಿಗೆ ನೆರವಾಗುತ್ತಿದೆ.
ಮಾ. 10 2021ರಂದು ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬಂಟ್ವಾಳ ತಾಲೂಕಿನ ನಿತ್ಯಾನಂದ ನಗರ ಮುಗ್ದಲ್ ಗುಡ್ಡೆಯ ವಿನಯ್ ಆವರ ಕುಟುಂಬಕ್ಕೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ರೂ. 25,000 ಧನ ಸಹಾಯ ನೀಡಲಾಯಿತು.
ಕಳೆದ ಒಂದು ವರ್ಷದಿಂದ ಬೆನ್ನುಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಂಗಳೂರು ಬಿಜೈ ನ್ಯೂ ರೋಡ್ ನಝರತ್ ಕಂಪೌಂಡ್ ಬಳಿ ವಾಸಿಸುತ್ತಿರುವ ಮ್ಯಾಕ್ಸಿಮ್ ಡಿಸೋಜ ರವರ ಚಿಕಿತ್ಸೆಗೆ ರೂ. 20,000 ಧನ ಸಹಾಯ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.