ಬೆಂಗಳೂರು: ಕನ್ನಡ ಸಿನಿಮಾರಂಗಕ್ಕೆ ಬೇಕಿರುವುದು ಕೆಲಸ, ಫುಡ್ ಕಿಟ್ ಅಲ್ಲ. ಕೆಲವು ಜನ ಕಷ್ಟ ಪಡುತ್ತಿರುವುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಆದರೆ ಅವರಿಗೆ ಕೆಲಸ ಬೇಕಾಗಿದೆ. ಫುಡ್ ಕಿಟ್ ನೀಡುವ ಮೂಲಕ ಅವರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಹಿರಿಯ ನಟ ರವಿಚಂದ್ರನ್ ಅಸಮಾಧಾನ ಹೊರಹಾಕಿದ್ದಾರೆ.
ಕೆಲವರು ಇದನ್ನು ಪಬ್ಲಿಸಿಟಿಗಾಗಿ ಮಾಡುತ್ತಿದ್ದಾರೆ. ಇದೆಲ್ಲಾ ಕಣ್ಣೊರೆಸುವ ತಂತ್ರವಾಗಿದೆ. ನಿಮಗೆ ದಾನ ಮಾಡುವ ಮನಸ್ಸಿದ್ದರೇ, ಅದನ್ನು ಪಬ್ಲಿಸಿಟಿ ಮಾಡುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಲಾಕ್‌ಡೌನ್ ಅನ್ನು ಏಪ್ರಿಲ್‌ನಲ್ಲಿ ಮೊದಲೇ ಜಾರಿಗೊಳಿಸಬೇಕಾಗಿತ್ತು. ಜನರು ಮನೆಯೊಳಗೆ ಇರಬೇಕೆಂದು ಸರ್ಕಾರ ಬಯಸಿದರೆ, ಅಗತ್ಯವಿರುವವರಿಗೆ ಸಹಾಯ ಮಾಡಲು ಹೊರಡಬೇಕು ಎಂದು ಹೇಳಿದ್ದಾರೆ.
ನಾನು ಒಬ್ಬ ವ್ಯಕ್ತಿ, ಒಂದು ವೇಳೆ ನನ್ನ ಕೈಗೆ ಒಂದು ರೂಪಾಯಿ ಸಿಕ್ಕರೇ ನಾಳೆಯೇ ಶೂಟಿಂಗ್ ಆರಂಭಿಸುತ್ತೇನೆ. ಲಾಕ್ ಡೌನ್ ಎಲ್ಲವನ್ನು ತಡೆಹಿಡಿದಿದೆ ಎಂದು ತಿಳಿಸಿದ್ದಾರೆ.












