ರಾಮನಗರ: ಪತಿ ಕೊರೊನಾದಿಂದ ಮೃತಪಟ್ಟ ಬೆನ್ನಲ್ಲೇ ಮನನೊಂದ ಮೂರು ತಿಂಗಳ ಗರ್ಭಿಣಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕನಕಪುರದ ಬಸವೇಶ್ವರ ನಗರದಲ್ಲಿ ನಡೆದಿದೆ.
ಕನಕಪುರ ಬೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಸಹಾಯಕರಾಗಿದ್ದ ನಂದಿನಿ (28) ಆತ್ಮಹತ್ಯೆಗೆ ಶರಣಾದ ಗರ್ಭಿಣಿ. ಎರಡು ವರ್ಷಗಳ ಹಿಂದೆ ಮೈಸೂರು ಮೂಲದ ಉದ್ಯಮಿ ಸತೀಶ್ ಎಂಬವರನ್ನು ನಂದಿನಿ ಪ್ರೀತಿಸಿ ವಿವಾಹವಾಗಿದ್ದರು.
ಕಳೆದ ವಾರ ಸತೀಶ್ ಅವರ ತಾಯಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಇದರ ಬೆನ್ನಲ್ಲೇ ಸತೀಶ್ ಅವರಿಗೂ ಕೊರೊನಾ ಸೋಂಕು ಕಾಣಿಕೊಂಡಿದ್ದು, ಬಳಿಕ ರೋಗ ಉಲ್ಬಣಗೊಂಡು ಮೂರು ದಿನಗಳ ಹಿಂದೆಯಷ್ಟೇ ಸತೀಶ್ ಮೃತಪಟ್ಟಿದ್ದರು. ಇದೀಗ ಪತಿಯ ಸಾವಿನಿಂದ ತೀವ್ರವಾಗಿ ನೊಂದ ನಂದಿನಿ ಕೂಡ ನೇಣು ಬಿಗಿದು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.