ಕೈ-ಕಾಲಿನ ಬೆರಳುಗಳ ಸೌಂದರ್ಯ ಹೆಚ್ಚಿಸುವುದೇ ಉಗುರುಗಳು. ಅಂತದ್ರಲ್ಲಿ ಉಗುರಿನ ಬಗ್ಗೆ ಕಾಳಜಿಯನ್ನು ವಹಿಸದವರು ಯಾರಿದ್ದಾರೆ ಹೇಳಿ.ಸ್ತ್ರೀಯರಿಗಂತೂ ತಮ್ಮ ಉಗುರುಗಳು ಹೆಚ್ಚು ಆಕರ್ಷಕ, ಸುಂದರವಾಗಿ ಕಾಣಬೇಕೆಂಬ ಆಸೆ ಜಾಸ್ತಿ ಇರುತ್ತದೆ.
ಈಗಿನ ಜೀವನ ಶೈಲಿ ಹಾಗೂ ಕೆಲಸಗಳ ನಡುವೆ ಉಗುರಿನ ಆರೈಕೆ ಮತ್ತು ಸ್ವಚ್ಛತೆಯನ್ನು ಕಾಪಾಡುವುದು ಬಹಳ ಕಷ್ಟದ ವಿಷಯ. ಉಗುರನ್ನು ಕೇವಲ ಸುಂದರವಾಗಿಡುವುದಲ್ಲ, ಸುಂದರವಾಗಿಡುವುದರ ಜೊತೆಗೆ ಉಗುರಿನ ಸ್ವಚ್ಛತೆಯು ಬಹಳ ಮುಖ್ಯ. ಉಗುರು ಸ್ವಚ್ಛವಾಗಿದ್ದಷ್ಟು ನಮ್ಮ ಆರೋಗ್ಯ ಕೂಡಾ ಹೆಚ್ಚು ಹದಗೆಡುವುದಿಲ್ಲ. ಉಗುರಿನ ಸಂದಿಗಳಲ್ಲಿ ಉಳಿಯುವ ಕೊಳೆ ನಮ್ಮ ಹೊಟ್ಟೆಯನ್ನು ಸೇರಿದಾಗ ಆರೋಗ್ಯದಲ್ಲಿ ಏರು-ಪೇರಾಗುತ್ತದೆ. ಇದಕ್ಕೆ ಉಗುರನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಉತ್ತಮ.ಬ್ಯುಸಿ ಲೈಫ್ ನ ಮಧ್ಯೆಯೂ ಸ್ವಲ್ಪ ಸಮಯ ಕೊಟ್ಟು ಉಗುರನ್ನು ಯಾವ ರೀತಿ ಆಕರ್ಷಕ ಹಾಗೂ ಸುಂದರವಾಗಿ ಬೆಳೆಸಬಹುದು ಎನ್ನುವುದನ್ನು ನೋಡೋಣ. ಸಿಲ್ವಿಯಾ ಕೊಡ್ದೆರೋ ಬರೆದ “ನಮ್ಮ ಆರೋಗ್ಯ ನಮ್ಮ ಕೈಲಿ”ಅಂಕಣ
ಉಗುರಿನ ಆರೈಕೆ ಮನೆಯಲ್ಲೇ:
▪️ಉಗುರುಗಳು ಗಟ್ಟಿ ಮತ್ತು ದರಗು ರೀತಿಯಲ್ಲಿದ್ದರೆ ಸ್ವಲ್ಪ ಜಿಲಾಟಿನ್ ಅನ್ನು ಬಿಸಿ ಹಾಲಿಗೆ ಬೆರೆಸಿ ರಾತ್ರಿ ಮಲಗುವ ಮುಂಚೆ ಕುಡಿಯುವುದರಿಂದ ಉಗುರುಗಳು ಮೃದುವಾಗುತ್ತದೆ.
▪️ಉಗುರು ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಕೊರತೆಯಿಂದ ದುರ್ಬಲವಾಗಿ ತುಂಡಾಗುತ್ತಿದ್ದರೆ ಪ್ರತಿನಿತ್ಯ ಆಹಾರದಲ್ಲಿ ಹಾಲು, ಮೊಸರು, ತರಕಾರಿ, ಮೊಟ್ಟೆ ಹಾಗೂ ಮೊಳಕೆಭರಿತ ಕಾಳುಗಳನ್ನು ಬಳಸುವುದು.
▪️ಉಗುರು ಗಡಸಾಗಿದ್ದರೆ ರಾತ್ರಿ ಮಲಗುವ ಸಮಯದಲ್ಲಿ ಓಲಿವ್ ಆಯಿಲ್ ಅನ್ನು ಉಗುರಿಗೆ ಹಚ್ಚಿ ಮಸಾಜ್ ಮಾಡಿ ಅಥವಾ ಓಲಿವ್ ಆಯಿಲ್ ನಲ್ಲಿ ಉಗುರನ್ನು ಅದ್ದಿ ಇಡಿ ಇದರಿಂದ ಉಗುರುಗಳು ನಯವಾಗುತ್ತದೆ.
▪️ನಿಂಬೆಹಣ್ಣನ್ನು ಕಟ್ ಮಾಡಿ ಅದರ ಹೋಳಿನಿಂದ ಉಗುರುಗಳಿಗೆ 5-8 ನಿಮಿಷ ಮಸಾಜ್ ಮಾಡುವುದರಿಂದ ಆರೋಗ್ಯವಂತ ಹಾಗೂ ಕೋಮಲ ಉಗುರು ಬೆಳೆಯುತ್ತದೆ.
▪️ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಅಡುಗೆ ಸೋಡಾವನ್ನು ಬೆರೆಸಿ, ಅದು ಕರಗಿದ ನಂತರ ಕೈ-ಕಾಲನ್ನು ಅದರಲ್ಲಿ 15 ನಿಮಿಷ ಇಟ್ಟು ನಂತರ ತೊಳೆಯಬೇಕು. ಇದರಿಂದ ಹಳದಿ ಬಣ್ಣ ಇದ್ದ ಉಗುರು ಬಿಳಿ ಬಣ್ಣಕ್ಕೆ ತಿರುಗುತ್ತದೆ.
▪️ಯಾವಾಗಲೂ ಉಗುರಿಗೆ ನೈಲ್ ಪಾಲೀಷ್ ಹಚ್ಚುವುದರಿಂದ ಉಗುರು ಬಣ್ಣ ಕಳೆದುಕೊಂಡು ಹಳದಿ ಬಣ್ಣಕ್ಕೆ ಬರುತ್ತದೆ. ಆದ್ದರಿಂದ ಪ್ರತಿನಿತ್ಯ ನೈಲ್ ಪಾಲೀಷ್ ಉಪಯೋಗಿಸುವುದನ್ನು ಕಡಿಮೆ ಮಡೋಣ.
▪️ನೈಲ್ ಪಾಲೀಷ್ ಬಳಸುವಾಗ ಕಡಿಮೆ ಅಸಿಟೋನ್ ಇರುವ ನೈಲ್ ಪಾಲೀಷ್ ಬಳಸಬೇಕು. ಇದರಿಂದ ಉಗುರಿನ ತೇವಾಂಶ ಕಡಿಮೆಯಾಗುವುದಿಲ್ಲ.
ಹೀಗೆ ಸ್ವಲ್ಪ ಸಮಯವನ್ನು ಉಗುರುಗಳ ಆರೈಕೆಗೆ ಕೊಡುವುದರಿಂದ ಆಕರ್ಷಕ,ಮೃದು,ಕೋಮಲ ಹಾಗೂ ಸುಂದರವಾದ ಉಗುರನ್ನು ಸಂಶಯವಿಲ್ಲದೆ ಪಡೆಯಬಹುದು
ಸಿಲ್ವಿಯಾ ಕೊಡ್ದೆರೋ ಕಾರ್ಕಳದ ಎಂಪಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ. ಕ್ರಿಯಾಶೀಲ ಆರೋಗ್ಯಕ್ಕೆ ಏನೇನು ಕಾಳಜಿ ಮಾಡಬೇಕು ಸುಂದರ ಜೀವನಶೈಲಿ ನಡೆಸೋದು ಹೇಗೆ ಮೊದಲಾದವುಗಳ ಕುರಿತು ತಮ್ಮದೇ ಚಿಂತನೆಯುಳ್ಳ ಇವರು ಕಿರುಚಿತ್ರಗಳಲ್ಲೂ ನಟಿಸಿದ್ದಾರೆ.ಹೊಸ ಹೊಸ ಪಾಕಪ್ರಯೋಗ,ಬರವಣಿಗೆ,ಓದು ಇವರ ಹವ್ಯಾಸ