ಬೆಂಗಳೂರು: ಲಾಕ್ ಡೌನ್ ಘೋಷಣೆಯಿಂದ ಹಲವು ಅಸಂಘಟಿತ ವಲಯಗಳ ಕಾರ್ಮಿಕರಿಗೆ, ರೈತರಿಗೆ, ದಿನಗೂಲಿ ನೌಕರರಿಗೆ, ಬಡವರು-ನಿರ್ಗತಿಕರಿಗೆ ತೀವ್ರ ಸಂಕಷ್ಟವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ 1,250 ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಯಾರಿಗೆ ಎಷ್ಟು ಆರ್ಥಿಕ ನೆರವು:
1) ಅಸಂಘಟಿತ ಕಾರ್ಮಿಕರಿಗೆ 2 ಸಾವಿರ ರೂ ಪರಿಹಾರ.
2) ಅಟೋ, ಟ್ಯಾಕ್ಸಿ ಚಾಲಕರಿಗೆ 3 ಸಾವಿರ ರೂ ಪರಿಹಾರ
3) ಕಲಾವಿದರು, ಕಲಾ ತಂಡಗಳಿಗೆ 3 ಸಾವಿರ ರೂ ಪರಿಹಾರ.

4) ಸವಿತಾ ಸಮಾಜದವರಿಗೆ 3 ಸಾವಿರ ಸಹಾಯಧನ
5) ಹೂವು ಬೆಳೆಗಾರರಿಗೆ ಹೆಕ್ಟೆರ್ ಗೆ 10 ಸಾವಿರ ರೂ.
6) ಬಹುತೇಕ ಎಲ್ಲಾ ಶ್ರಮಿಕ ವರ್ಗದವರಿಗೆ 3 ಸಾವಿರ ಸಹಾಯಧನ ನೀಡಲಾಗುತ್ತದೆ.
7) ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ ಹೆಕ್ಟೇರ್ ಗೆ 10 ಸಾವಿರ.
ಕಟ್ಟಡ ಕಾರ್ಮಿಕರಿಗೆ 3000 ರೂ. (ಒಟ್ಟು 493 ಕೋಟಿ), ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ (3.5 ಲಕ್ಷ ಜನರು 65 ಕೋಟಿ ರೂ.) ರಸ್ತೆ ವ್ಯಾಪಾರಿಗಳು (2 ಲಕ್ಷ ಜನರು 45.ಕೋಟಿ), ಕಲಾವಿದರಿಗೆ ತಲಾ 3000 ರೂ (ಸುಮಾರು 4 ಕೋಟಿ). ಸಣ್ಣ ಮತ್ತು ಮಧ್ಯಮ ಅವಧಿ ಸಾಲ ಪಡೆದ ಮರು ಪಾವತಿ ಅವಧಿ 31-7 -21 ಕ್ಕೆ ವಿಸ್ತರಿಸಲಾಗಿದೆ.

ಗರಿಬ್ ಕಲ್ಯಾಣ ಅಂತ್ಯೋದಯ ಯೋಜನೆ ಅಡಿಯಲ್ಲಿ ರಾಜ್ಯದಿಂದ 180 ಕೋಟಿ, ನೇಕಾರರು, ಕುಂಬಾರರು, ಚಮ್ಮಾರ ಮಡಿವಾಳರು, ಕಮ್ಮಾರರು, ಅಕ್ಕಸಾಲಿಗರು ಟೈಲರ್, ಚಿಂದಿ ಆಯುವವರಿಗೆ, ಹಮಾಲಿಗಳು, ಬೀಡಿ ಕಾರ್ಮಿಕರು ಸೇರಿದಂತೆ ವಿವಿಧ ಸಮುದಾಯಗಳಿಗೆ 2000 ರೂ.
















