ನವದೆಹಲಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಮತ್ತಷ್ಟು ಹೆಚ್ಚಿದ್ದು, ಇದರ ಪರಿಣಾಮ ‘ತೌಕ್ತೆ’ ಚಂಡಮಾರುತ ಮತ್ತಷ್ಟು ಪ್ರಬಲಗೊಂಡಿದೆ.
ಕೇರಳದಿಂದ ಕರ್ನಾಟಕ ಕರಾವಳಿಯಿಂದ ಗುಜರಾತ್‌ನತ್ತ ಸಾಗಿರುವ ಚಂಡಮಾರುತ ಪೋರಬಂದರ್ ಹಾಗೂ ನಲಿಯಾ ನಡುವಿನ ಕರಾವಳಿ ಪ್ರದೇಶವನ್ನು ಮೇ 18ರ ವೇಳೆಗೆ ದಾಟುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಿಳಿಸಿದೆ.
ಮೇ 16ರಿಂದ 18ರ ವರೆಗಿನ ಅವಧಿಯಲ್ಲಿ ತೌಕ್ತೆ ಚಂಡಮಾರುತ ಹೆಚ್ಚು ತೀವ್ರಸ್ವರೂಪ ಪಡೆದುಕೊಳ್ಳಲಿದೆ ಎಂದೂ ಹೇಳಿದೆ.