ಪ್ಯೋಂಗ್ಯಾಂಗ್: ನಮ್ಮ ದೇಶದಲ್ಲಿ ಇಂದಿಗೂ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲ ಎಂದು ಒಂದು ದೇಶ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ.ಅಬ್ಬಾ ಇದೇನಪ್ಪಾ ಜಗತ್ತೇ ಕೊರೋನಾದಿಂದ ತತ್ತರಿಸುತ್ತಿದ್ದರೆ ಅದ್ಯಾವ ದೇಶದಲ್ಲಿ ಕೋರೋನಾನೇ ಇಲ್ವಂತೆ ಅಂತ ಅಚ್ಚರಿ ಪಡ್ತಿದ್ದೀರಾ.
ಹೌದಂತೆ. ಕಿಮ್ ಜಾಂಗ್ ಉನ್ ಆಡಳಿತವಿರುವ ಉತ್ತರ ಕೊರಿಯಾದಲ್ಲಿ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲವಂತೆ. ಈ ಬಗ್ಗೆ ಉತ್ತರ ಕೊರಿಯಾ ಸರ್ಕಾರವೇ ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿದ್ದು ಎಲ್ಲೆಡೆ ಅಚ್ಚರಿ ವ್ಯಕ್ತವಾಗಿದೆ.
ಏಪ್ರಿಲ್ ನಿಂದ ಈ ವರೆಗೂ ಉತ್ತರ ಕೊರಿಯಾದಲ್ಲಿ 25,986 ಜನರನ್ನು ಕೊರೋನಾ ವೈರಸ್ ಸೋಂಕು ಪರೀಕ್ಷೆಗೊಳಪಡಿಸಲಾಗಿದ್ದು, ಈ ವರೆಗೂ ಒಂದೇ ಒಂದು ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಏಪ್ರಿಲ್ 23-29ರ ಅವಧಿಯಲ್ಲಿ ಪರೀಕ್ಷಿಸಲಾದ 751 ಜನರ ಪೈಕಿ 139 ಜನರಿಗೆ ಇನ್ಫ್ಲುಯೆನ್ಸ ತರಹದ ಕಾಯಿಲೆಗಳು ಅಥವಾ ತೀವ್ರ ಉಸಿರಾಟದ ಸೋಂಕು ಇರುವುದು ಪತ್ತೆಯಾಗಿತ್ತು. ಆದರೆ ಇದು ಕೊರೋನಾ ಸೋಂಕು ಅಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ ಎಂದು ಉತ್ತರ ಕೊರಿಯಾ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ. ಆದರೆ ಉತ್ತರ ಕೋರಿಯಾದ ಈ ನಡೆ ಎಲ್ಲಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ಚೀನಾದ ಅಪಾಋ ನಂಟಿರುವ ಈ ದೇಶ ಸುಳ್ಳು ಮಾಹಿತಿ ನೀಡುತ್ತಿದೆ ಎನ್ನುವುದು ಬಹುತೇಕ ಮಂದಿಯ ಸಂಶಯ