ನವದೆಹಲಿ: ದೇಶದಲ್ಲಿ ಒಂದು ಕಡೆ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಈ ಮಧ್ಯೆ ದೇಶದ ಜನರಿಗೆ ತೈಲ ಬೆಲೆ ಏರಿಕೆಯ ಶಾಕ್ ಉಂಟಾಗಿದೆ.
ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆಯಲ್ಲಿ ಲೀಟರ್ಗೆ 25 ಪೈಸೆ ಮತ್ತು ಡೀಸೆಲ್ 30 ಪೈಸೆ ಹೆಚ್ಚಳವಾಗಿದೆ. ಅಂತರರಾಷ್ಟ್ರೀಯ ತೈಲ ಬೆಲೆಗಳ ಹೆಚ್ಚಳದ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ದರ ಏರಿಸಿವೆ.
ಸದ್ಯ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹90.74ನಿಂದ ₹90.99ಕ್ಕೆ ಏರಿಕೆಯಾದರೆ, ಡೀಸೆಲ್ ದರ ₹81.12ನಿಂದ ₹81.42ಕ್ಕೆ ಏರಿದೆ.
ಈ ಮೂರು ದಿನಗಳಲ್ಲಿ, ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 59 ಪೈಸೆ ಮತ್ತು ಡೀಸೆಲ್ 69 ಪೈಸೆ ಹೆಚ್ಚಳವಾಗಿದೆ.
ಕಳೆದ ಮಾರ್ಚ್ನಲ್ಲಿ ಸರ್ಕಾರ ಅಬಕಾರಿ ಸುಂಕವನ್ನು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಸಿದಾಗಿನಿಂದ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ ₹ 21.58 ಮತ್ತು ಡೀಸೆಲ್ ₹ 19.18 ಏರಿಕೆಯಾಗಿದೆ. ಮಾರ್ಚ್ 24 ಮತ್ತು ಏಪ್ರಿಲ್ 15 ರ ನಡುವೆ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯಲ್ಲಿ 67 ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ 74 ಪೈಸೆ ಇಳಿಕೆ ಮಾಡಿದ್ದವು.