ಆರೋಗ್ಯಕರವಾದ, ಸುಂದರ, ಸ್ವಚ್ಛ ಹಲ್ಲುಗಳನ್ನು ಪಡೆಯುವುದು ಎಲ್ಲರ ಇಚ್ಛೆ. ಹಲ್ಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಸಾಮಾನ್ಯವಾಗಿ ಎಲ್ಲರೂ ಬೆಳಿಗ್ಗೆ ಎದ್ದ ತಕ್ಷಣ ಬ್ರಶ್ ಮಾಡುವುದು ರೂಢಿ. ಆದರೆ ರಾತ್ರಿ ಮಲಗುವ ಮುನ್ನ ಬ್ರಶ್ ಮಾಡುವುದು ತುಂಬಾ ಮುಖ್ಯ. ರಾತ್ರಿ ಹೊತ್ತಲ್ಲಿ ನಾವು ಸೇವಿಸಿದ ಆಹಾರ ಹಲ್ಲಿನಲ್ಲಿ ಸಿಲುಕಿಕೊಂಡಾಗ ಬ್ಯಾಕ್ಟೀರಿಯಾಗಳು ಆಹಾರದ ಭಾಗಗಳನ್ನು ಸೇವಿಸಲು ಆರಂಭಿಸುತ್ತದೆ. ಇದರಿಂದ ಹಲ್ಲುಗಳು ಕೊಳೆಯಲು ಪ್ರಾರಂಭವಾಗುತ್ತದೆ, ಮಾತ್ರವಲ್ಲದೆ ಬಾಯಿಯ ದುರ್ವಾಸನೆ ಹೆಚ್ಚುತ್ತದೆ.
ಇನ್ನು ತಂಬಾಕು, ಗುಟ್ಕಾ, ಬೀಡಿ, ಸಿಗರೇಟ್ ಮುಂತಾದ ದುಶ್ಚಟಗಳಿಂದಲೂ ಹಲ್ಲಿನ ಆರೋಗ್ಯ ಹಾಳಾಗುತ್ತೆ. ಚಿಕ್ಕ ವಯಸ್ಸಿನಿಂದಲೇ ಕನಿಷ್ಠ ಎರಡು ಬಾರಿ ಹಲ್ಲುಜ್ಜುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸುವುದು ಉತ್ತಮ.
ಹಲ್ಲಿನ ಸೌಂದರ್ಯವನ್ನು ಹೆಚ್ಚಿಸಲು ಕೆಲವೊಂದು ಟಿಪ್ಸ್
▪️ ಹಲ್ಲುಗಳು ಬಿಳಿಯಾಗಿರಲು ಮತ್ತು ಹುಳುಕಾಗದೇ ಇರಲು ಪ್ರತಿನಿತ್ಯ ನೆಲ್ಲಿಕಾಯಿಯನ್ನು ಸೇವಿಸಿ.
▪️ ಕೆಲವು ದಿನಗಳ ಕಾಲ ಉಪ್ಪು ಅಥವಾ ಅಡುಗೆ ಸೋಡಾದಲ್ಲಿ ಹಲ್ಲುಜ್ಜುವುದರಿಂದ ಹಲ್ಲು ಹಳದಿಯಾಗುವುದನ್ನು ತಡೆಯಬಹುದು.
▪️ ಊಟದ ನಂತರ ಕ್ಯಾರೆಟ್ ಅಥವ ಆಪಲ್ ಸೇವಿಸುವುದರಿಂದ ಹಲ್ಲು ಬಲಿಷ್ಠ ಮತ್ತು ಸ್ವಚ್ಛವಾಗುತ್ತದೆ.
▪️ ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಹಲ್ಲುಗಳಿಗೆ ಉಜ್ಜಿ ಸ್ವಲ್ಪ ಹೊತ್ತಿನ ಬಳಿಕ ಬ್ರಶ್ ಮಾಡಿದರೆ ಹಲ್ಲಿನ ಅಂದವನ್ನು ಕಾಪಾಡುತ್ತದೆ.
▪️ ಹಲ್ಲುಜ್ಜಲು ಪೇಸ್ಟ್ ಬದಲು ಮನೆಯಲ್ಲೇ ತಯಾರಿಸಿದ ಹಲ್ಲುಜ್ಜುವ ಹುಡಿಯನ್ನು ಉಪಯೋಗಿಸುವುದು ಉತ್ತಮ.
▪️ ಬೇವಿನ ಸೊಪ್ಪನ್ನು ಒಣಗಿಸಿ ಪುಡಿ ಮಾಡಿ ಇದರಲ್ಲಿ ಹಲ್ಲುಜ್ಜುವುದರಿಂದ ಹಲ್ಲು ಪಳಪಳನೆ ಹೊಳೆಯುತ್ತದೆ.
««ಸಿಂಥಿಯಾ ಮೆಲ್ವಿನ್ ಮಸ್ಕರೇನ್ಹಸ್