ಮೂಡುಬಿದಿರೆ: ಗೂಡ್ಸ್ ಲಾರಿ ಮತ್ತು ಬೈಕ್ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಮತಪಟ್ಟ ಘಟನೆ ಮೂಡುಬಿದಿರೆ ಸಮೀಪದ ಶಿರ್ತಾಡಿ ಎಂಬಲ್ಲಿ ಇಂದು ಸಂಭವಿಸಿದೆ.
ಮೃತ ಬೈಕ್ ಸವಾರನನ್ನು ಉಜಿರೆಯ ನೇಕಾರ ಪೇಟೆಯ ನಿವಾಸಿ ಲಾಯಿಲ ತಾಪಂ ಮಾಜಿ ಸದಸ್ಯೆ ಶೋಭಾ ಶೆಟ್ಟಿ ಅವರ ದ್ವೀತಿಯ ಪುತ್ರ ಭವಿತ್ ಶೆಟ್ಟಿ (33) ಎಂದು ಗುರುತಿಸಲಾಗಿದೆ. ಇವರು ಅಮೆಜಾನ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು, ಪಾರ್ಸೆಲ್ ಡೆಲಿವರಿ ಕೊಟ್ಟು ವಾಪಾಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಅಪಘಾತದಲ್ಲಿ ಭವಿತ್ ಶೆಟ್ಟಿ ತಲೆಗೆ ತೀವ್ರ ಗಾಯವಾಗಿದ್ದು, ಕೂಡಲೇ ಪಕ್ಕದ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಭವಿತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.












