ಅಕ್ರಮ ಗೋ ಕಳ್ಳತನದ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಒತ್ತಾಯ

ಕಾರ್ಕಳ: ಕಾರ್ಕಳ ತಾಲೂಕಿನಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಗೋಸಾಗಾಟ ಹಾಗೂ ಅಕ್ರಮ ಗೋ ಕಳ್ಳತನಕ್ಕೆ ಕೂಡಲೇ ಕಡಿವಾಣ ಹಾಕುವಂತೆ ಹಿಂದೂ ಜಾಗರಣ ವೇದಿಕೆ ವತಿಯಿಂದ ಕಾರ್ಕಳ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.

ಕುಕ್ಕುಂದೂರು, ಈದು, ಬಜಗೋಳಿ, ಹೊಸ್ಮಾರು, ಬೆಳ್ಮಣ್‌, ನಿಟ್ಟೆ, ಬೈಲೂರು ಪ್ರದೇಶಗಳಲ್ಲಿ ನಿರಂತರವಾಗಿ ಗೋ ಕಳ್ಳತನವಾಗುತ್ತಿದೆ. ಗೋ ಕಳ್ಳರು ಯಾವುದೇ ಕಾನೂನಿನ ಹೆದರಿಕೆ ಇಲ್ಲದೆ ಗೋಕಳ್ಳತನದಲ್ಲಿ ತೊಡಗಿದ್ದಾರೆ. ಇವರ ವಿರುದ್ಧ ಯಾವುದೇ ಕ್ರಮ ಆಗುತ್ತಿಲ್ಲ. ಇದು ಸಮಾಜದ ಶಾಂತಿಗೆ ಭಂಗವಾಗಿದ್ದು, ಗೋಕಳ್ಳರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವೇದಿಕೆಯ ಕಾರ್ಯಕರ್ತರು ಒತ್ತಾಯಿಸಿದರು.

ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಪ್ರಶಾಂತ್‌ ನಾಯಕ್‌, ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌ ನಾರಾವಿ, ರಮೇಶ್‌ ಕಲ್ಲೊಟ್ಟೆ, ರತ್ನಾಕರ್‌ ಅಮೀನ್‌, ಸುಜಿತ್‌ ಸಫಲಿಗ, ರಾಘವೇಂದ್ರ ಕುಲಾಲ್‌, ಪ್ರಾಣೇಶ್‌ ಶೆಟ್ಟಿ, ಹರೀಶ್‌ ಬಜಗೋಳಿ, ಪ್ರಶಾಂತ್‌ ಬೈಲೂರು ಇದ್ದರು.