ಉದ್ಯಾವರ: ಉದ್ಯಾವರ ಶ್ರೀಪ್ರಸನ್ನ ಸೋಮೇಶ್ವರ ದೇವಸ್ಥಾನ ಮತ್ತು ಶ್ರೀಶಂಭು ಶೈಲೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಜಂಟಿ ಆಶ್ರಯದಲ್ಲಿ ಉದ್ಯಾವರದ ಶ್ರೀಶಂಭುಶೈಲೇಶ್ವರ ದೇವಸ್ಥಾನದ ಮಾರ್ಕಂಡೇಯ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಭಜನಾ ಕಮ್ಮಟ ಮತ್ತು 650ನೇ ದಾಸ ಸಿಂಚನ ಕಾರ್ಯಕ್ರಮ ನಡೆಯಿತು.
ಉಡುಪಿ ಜೆಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದೆ ಮಾಯಾ ಕಾಮತ್ ಮಣಿಪಾಲ ಅವರ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಿಎಸ್ಎನ್ಎಲ್ ನಿವೃತ್ತ ಉಪ ಮಹಾಪ್ರಂಬಧಕ ಸುರೇಶ್ ಭಟ್ ಉದ್ಘಾಟಿಸಿದರು. ಶ್ರೀಶಂಭುಶೈಲೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಾಘವೇಂದ್ರ ಮಯ್ಯ ಅಧ್ಯಕ್ಷತೆ ವಹಿಸಿದ್ದರು.
ಸಂಗೀತ ಗುರು ಎಂ.ಎಸ್. ಗಿರಿಧರ್ ಬೆಂಗಳೂರು, ಶ್ರೀಶಂಭುಶೈಲೇಶ್ವರ ದೇವಸ್ಥಾನದ ಅರ್ಚಕ ಗಣಪತಿ ಆಚಾರ್ಯ, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ ನಾಯಕ್ ಕರ್ವಾಲು, ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಮಣಿಪಾಲ ಆಶ್ಲೇಷಾ ಹೋಟೆಲ್ ಆಡಳಿತ ಪಾಲುದಾರೆ ಶ್ರುತಿ ಜಿ. ಶೆಣೈ, ತುಳುಕೂಟದ ಸದಸ್ಯೆ ಆಶಾ ಶೆಟ್ಟಿ, ಕಟಪಾಡಿ ಭಜನಾಸ್ತಕ ಭಜನಾ ಮಂಡಳಿಯ ಅಧ್ಯಕ್ಷೆ ನಂದಿನಿ ಎನ್. ಶೆಣೈ, ವಸುಧಾ ಗಿರಿಧರ್ ಹಾಗೂ ಮಹಾಮಾಯಾ ಭಜನಾ ಮಂಡಳಿಯ ಈಶ್ವರ ನಗರ ಮಣಿಪಾಲ ಇದರ ಸಂಸ್ಥಾಪಕಿ ಮೋಹಿನಿ ಭಟ್ ಮಂಜೇಶ್ವರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಖ್ಯಾತ ಹರಿಕಥಾ ಕಲಾವಿದೆ ಶ್ವೇತಾ ಸುಧಾಕರ್ ಪೈ ಅವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ 650ನೇ ದಾಸ ಸಿಂಚನಾ ಕಾರ್ಯಕ್ರಮ ನಡೆಯಿತು. ಸುಮಾರು 9 ವಿವಿಧ ಭಜನಾ ಮಹಿಳಾ ತಂಡಗಳು ಭಾಗವಹಿಸಿದ್ದವು.
ಮಾಯಾ ಕಾಮತ್ ಸ್ವಾಗತಿಸಿದರು. ಶೋಭಾ ಸಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಲಕ್ಷ್ಮೀ ಶೆಣೈ ಕಟಪಾಡಿ ವಂದಿಸಿದರು.