ಪವರ್ ಲಿಫ್ಟಿಂಗ್: ಕಾರ್ಕಳದ ಸ್ವಾತಿಗೆ ಬೆಳ್ಳಿ ಪದಕ

ಕಾರ್ಕಳ: ದಾವಣಗೆರೆಯ ಕುವೆಂಪು ಭವನದಲ್ಲಿ ಏ. 10 ಮತ್ತು 11ರಂದು ನಡೆದ ಕರ್ನಾಟಕ ರಾಜ್ಯಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಕಾರ್ಕಳದ ಸ್ವಾತಿ ಯು.ಕೆ. ಅವರು 63 ಕೆ.ಜಿ. ದೇಹತೂಕ ಹಿರಿಯ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗಳಿಸಿದ್ದಾರೆ.

ಇವರು ಬೆಂಚ್ ಪ್ರೆಸ್ ವಿಭಾಗದಲ್ಲಿ 62.5 ಕೆ.ಜಿ ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದ್ದಾರೆ. ಸ್ವಾತಿ ಮಂಗಳೂರಿನ ಪ್ರದೀಪ್ಸ್ ಜಿಮ್ ನಲ್ಲಿ ತರಬೇತಿ‌ ಪಡೆಯುತ್ತಿದ್ದಾರೆ. ಇವರು ಕಾರ್ಕಳದ ಎಚ್ ಡಿಎಫ್ ಸಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.