ಕಾರ್ಕಳ: ಇಲ್ಲಿನ ಈದು ಶ್ರೀ ಮೂಜಿಲ್ನಾಯ ದೈವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಇದೇ ಬರುವ ಏ.21ಕ್ಕೆ ನೆರವೇರಿಸಲು ತೀರ್ಮಾನಿಸಲಾಗಿದೆ.
ಇಂದು ದೈವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ತಂತ್ರಿಗಳು ರಾಶಿ ಪ್ರಶ್ನೆ ಹಾಕಿದ್ದು, ಅದರ ಮೂಲಕ ಏ. 21ರಂದು ಜಾತ್ರ ಮಹೋತ್ಸವ ನೆರವೇರಿಸಲು ತೀರ್ಮಾನಿಸಲಾಗಿದೆ.
ಈ ಸಂದರ್ಭದಲ್ಲಿ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರು ಹಾಗೂ ಧಾರ್ಮಿಕ ಮುಖಂಡ ಭಾಸ್ಕರ ಕೋಟ್ಯಾನ್, ದೈವಸ್ಥಾನದ ಆಡಳಿತ ಮೊಕ್ತೇಸರ ಡಾ. ವಿಜಯ ಕುಮಾರ್ ಕಾಜವ, ಅಶೋಕ್ ಕುಮಾರ್ ಜೈನ್, ಮಹಾವೀರ ಹೆಗ್ಡೆ ಮತ್ತು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.