ಕಾರ್ಕಳ: ಚುಚ್ಚು ಮದ್ದಿನ ಅಡ್ಡ ಪರಿಣಾಮದಿಂದ ನಾಲ್ಕೂವರೆ ತಿಂಗಳ ಮಗು ಮೃತ್ಯು; ಆರೋಪ

ಕಾರ್ಕಳ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡಲಾದ ಚುಚ್ಚು ಮದ್ದಿನ ಅಡ್ಡ ಪರಿಣಾಮದಿಂದ ನಾಲ್ಕೂವರೆ ತಿಂಗಳ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮನೆಯವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶ್ರೀಯಾನ್ ಮೃತ ಮಗು. ಮಗುವಿಗೆ ಕಾರ್ಕಳ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ರೆಂಜಾಳದಲ್ಲಿ ಎ. 7ರಂದು ಮಧ್ಯಾಹ್ನ 12.30ರ ಸುಮಾರಿಗೆ ತಿಂಗಳ ಚುಚ್ಚು ಮದ್ದು ನೀಡಿದ್ದರು. ನಂತರ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದು, ಮಧ್ಯಾಹ್ನ 3 ಗಂಟೆಯ ವೇಳೆ ಮಗುವಿನ ಬಾಯಿಯಲ್ಲಿ ನೊರೆ ಬಂದು ತೀವ್ರ ಅಸ್ವಸ್ಥಗೊಂಡಿತ್ತು.

ತಕ್ಷಣವೇ ಮನೆಯವರು ಮಗುವನ್ನು ಕಾರ್ಕಳ ಖಾಸಗಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.