ಕಟಪಾಡಿಯಲ್ಲಿ “ಬೇಕ್ ಲೈನ್” ಶುಭಾರಂಭ

ಕಟಪಾಡಿ: ಕರಾವಳಿಯ ಪ್ರಸಿದ್ಧ ಕೇಕ್ ಶಾಪ್, ಬೇಕರಿ “ಬೇಕ್ ಲೈನ್” ಸಂಸ್ಥೆಯ ನೂತನ ಬೇಕರಿ ಶಿರ್ವ-ಮಂಚಕಲ್‌ ರೋಡ್ ನ ಬ್ಯಾಂಕ್ ಆಫ್ ಬರೋಡಾದ ಬಳಿ ಬುಧವಾರ ಶುಭಾರಂಭಗೊಂಡಿತು.

ಉದ್ಘಾಟನಾ ಸಮಾರಂಭದಲ್ಲಿ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಗಂಗಾಧರ ಸುವರ್ಣ, ಕಟಪಾಡಿ ಗ್ರಾಪಂ ಸದಸ್ಯ ದಯಾನಂದ ಶೆಟ್ಟಿ ಕಟಪಾಡಿ, ಬೇಕ್ ಲೈನ್ ಸಂಸ್ಥೆಯ ಮಾಲೀಕ ಪ್ರಶಾಂತ್ ಕೋಟ್ಯಾನ್, ಸದಾನಂದ ಪಾತ್ರಿ, ಜಯ ಪೂಜಾರಿ ಉಪಸ್ಥಿತರಿದ್ದರು.

ಈಗಾಗಲೇ ಉಡುಪಿ, ಕಾರ್ಕಳ, ತೆಂಕನಿಡಿಯೂರು, ಮುದರಂಗಡಿ, ಮೂಡುಬೆಳ್ಳೆಯಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಬೇಕ್ ಲೈನ್, ರುಚಿಕರ ವೆರೈಟಿ ಕೇಕ್ ಗಳನ್ನು ಗ್ರಾಹಕರಿಗೆ ನೀಡುತ್ತಿದೆ.

ಫ್ರೀ ಹೋಮ್ ಡೆಲಿವೆರಿ:
ಕರೆ ಮಾಡಿದರೆ ಕ್ಲಪ್ತ ಸಮಯದಲ್ಲಿ ಮನೆಬಾಗಿಲಿಗೆ ರುಚಿಕರ ಕೇಕ್ ಗಳನ್ನು ಡೆಲಿವರಿ ಮಾಡುವ ಫ್ರೀ ಹೋಮ್ ಡೆಲಿವೆರಿ ಸೇವೆಗಳಿಗೆ ಕೂಡ ಬೇಕ್ ಲೈನ್ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಜನಪ್ರಿಯತೆ ಗಳಿಸಿದೆ. ವಿಭಿನ್ನ ಮಾದರಿಯ ತಾಜಾ ಕೇಕ್ ಗಳು ಮಾತ್ರವಲ್ಲ ಬಗೆಬಗೆಯ ಸಿಹಿ ಖಾದ್ಯಗಳು ಕೂಡ ಬೇಕ್ ಲೈನ್ ನಲ್ಲಿ ಲಭ್ಯ.

ಕಟಪಾಡಿಯ ಜನತೆಗೆ ಬೇಕಾದ ವಿಭಿನ್ನ ಮಾದರಿಯ ಫ್ರೆಶ್ ಕೇಕ್ ಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಒದಗಿಸಬೇಕು, ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಬೇಕು ಎನ್ನುವುದು ಬೇಕ್ ಲೈನ್ ಸಂಸ್ಥೆಯ ಆಶಯ.