ಕೋವಿಡ್ ಮಾರ್ಗಸೂಚಿಯಲ್ಲಿ ಸಡಿಲಿಕೆ: ಜಿಮ್ ಗಳಲ್ಲಿ ಶೇ. 50ರಷ್ಟು ಜನರಿಗೆ ಅವಕಾಶ

ಬೆಂಗಳೂರು: ರಾಜ್ಯ ಸರ್ಕಾರವು ಏ. 2ರಂದು ಹೊರಡಿಸಿದ ಮಾರ್ಗಸೂಚಿಯಲ್ಲಿ ಕೆಲ ಸಡಿಲಿಕೆ ಮಾಡಿದ್ದು, ಅದರಂತೆ ಜಿಮ್‌ಗಳಲ್ಲಿ ಶೇ. 50ರಷ್ಟು ಜನರಿಗೆ ಅವಕಾಶ ಕಲ್ಪಿಸಲು ಅನುಮತಿ ನೀಡಿ ಭಾನುವಾರ ಆದೇಶ ಹೊರಡಿಸಿದೆ.

‌ಕೋವಿಡ್‌ ನಿಯಂತ್ರಿಸುವ ನಿಟ್ಟಿನಲ್ಲಿ ಏ. 2ರಂದು ಪ್ರಕಟಿಸಲಾಗಿದ್ದ ಮಾರ್ಗಸೂಚಿಯಲ್ಲಿ ಜಿಮ್‌ಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿತ್ತು. ಇದೀಗ ಜಿಮ್‌ಗಳಿಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಹಲವು ಮನವಿಗಳು ಬಂದಿರುವ ಬೆನ್ನಲ್ಲೇ ಈ ಆದೇಶ ಪ್ರಕಟಿಸಲಾಗಿದೆ.