ಬೇಸಿಗೆ ಬಂದರೆ ಸಾಕು ಬಿಸಿಲಿನ ತಾಪದಿಂದ ಧಣಿವರಿಸಿಕೊಳ್ಳಲು ಹೆಚ್ಚಿನವರು ಕೋಲ್ಡ್ ಜ್ಯೂಸ್, ಕೋಲ್ಡ್ ಡ್ರಿಂಕ್ಸ್ ಮೊರೆಹೋಗುತ್ತಾರೆ. ಆದ್ರೆ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಬಾದಾಮಿ ಮಿಲ್ಕ್ ಶೇಕ್ ಕುಡಿದ್ರೆ ದಾಹವೂ ನೀಗುತ್ತೆ, ಆರೋಗ್ಯಕ್ಕೂ ಉತ್ತಮ. ಹಾಗಿದ್ರೆ ಇದನ್ನು ತಯಾರಿಸುವ ವಿಧಾನ ತಿಳಿಯೋಣ ಬನ್ನಿ.
ಬೇಕಾಗುವ ಪದಾರ್ಥಗಳು.
ಬಾದಾಮಿ- 25 (ನೆನೆಸಿ ಸಿಪ್ಪೆ ತೆಗೆದದ್ದು)
ಹಾಲು – 1 ಲೀಟರ್
ಕಂಡೆನ್ಸ್ಡ್ ಮಿಲ್ಕ್ – ಅರ್ಧ ಬಟ್ಟಲು
ಸಕ್ಕರೆ- ಸ್ವಲ್ಪ
ಕೇಸರಿ- ಸ್ವಲ್ಪ
ವೆನಿಲಾ ಐಸ್ ಕ್ರೀಮ್ – ಸ್ವಲ್ಪ
ಮಾಡುವ ವಿಧಾನ:
ಮೊದಲಿಗೆ ಬಾದಾಮಿ ಹಾಗೂ ಸ್ವಲ್ಪ ಹಾಲನ್ನು ಮಿಕ್ಸಿ ಜಾರ್ ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು.
ಒಲೆಯ ಮೇಲೆ ಪಾತ್ರೆ ಇಟ್ಟು ಹಾಲನ್ನು ಹಾಕಿ 5-10 ನಿಮಿಷ ಕಾಯಿಸಬೇಕು. (ಆಗಾಗ ಸ್ಪೂನ್ ನಲ್ಲಿ ಕೈಯಾಡಿಸುತ್ತಿರಬೇಕು.
ನಂತರ ಕಂಡೆನ್ಸ್ಡ್ ಮಿಲ್ಕ್, ರುಬ್ಬಿಕೊಂಡ ಬಾದಾಮಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 10 ನಿಮಿಷ ಕುದಿಯಲು ಬಿಡಬೇಕು. ನಂತರ ಕೇಸರಿ ದಳವನ್ನು ಹಾಕಿ 3 ನಿಮಿಷ ಕಾಯಲು ಬಿಡಿ.
ನಂತರ ಹಾಲು ಸಂಪೂರ್ಣವಾಗಿ ತಣ್ಣಗಾದ ಬಳಿಕ ಫ್ರಿಡ್ಜ್ ನಲ್ಲಿ 30 ನಿಮಿಷ ಇಡಿ. ನಂತರ ಮಿಕ್ಸಿ ಜಾರ್’ಗೆ ತಣ್ಣಗಾದ ಹಾಲು ಸ್ವಲ್ಪ ಸಕ್ಕರೆ ಹಾಗೂ ಐಸ್ ಕ್ರೀಮ್ ಹಾಕಿ ರುಬ್ಬಿಕೊಂಡರೆ ರುಚಿಕರವಾದ ಬಾದಾಮಿ ಮಿಲ್ಕ್ ಶೇಕ್ ಕುಡಿಯಲು ಸಿದ್ಧ.