ಕುಂದಾಪುರ:ಸಂಸದೆ ಶೋಭಾ ಕರಂದ್ಲಾಜೆಯವರು ಉದ್ಯೋಗ ಮೇಳದ ಉದ್ಘಾಟನಾ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡಿ ಆಕ್ರೋಶಗೊಂಡರು. ತಮ್ಮ ವಿರುದ್ದ ಅಪಪ್ರಚಾರ ಮಾಡಿ ಶೋಭಾ ಗೋ ಬ್ಯಾಕ್ ಅಭಿಯಾನ ಮಾಡುತ್ತಿರುವ ತಮ್ಮದೇ ಪಕ್ಷದ ಯುವ ಕಾರ್ಯಕರ್ತರ ವಿರುದ್ದ ಆಕ್ರೋಶ ಮಾತುಗಳನ್ನಾಡಿದರು. ಅಲ್ಲದೇ ಚುನಾವಣಾ ಪ್ರಚಾರದ ಭಾಷಣ ಮಾಡುವ ರೀತಿಯಲ್ಲಿ ತಮ್ಮ ಅವಧಿಯಲ್ಲಾದ ಅಭಿವೃದ್ದಿ ಕಾರ್ಯಗಳ ಪಟ್ಟಿಗಳನ್ನು ವೇದಿಕೆಯ ಮುಂಭಾಗದಲ್ಲಿದ್ದ ಉದ್ಯೋಗಾಕಾಂಕ್ಷಿಗಳ ಮುಂದಿಡುತ್ತಾ ಹೋದರು. ತಾನು ಮಾಡಿದಷ್ಟು ಅಭಿವೃದ್ದಿ ಕಾರ್ಯ ಯಾವ ಗಂಡಸು ಮಾಡಿಲ್ಲವೆಂದು ಪರೋಕ್ಷವಾಗಿ ಮಾಜಿ ಸಂಸದ, ಬಿಜೆಪಿ ಟಿಕೆಟ್ ಆಕಾಂಕ್ಷಿ ಜಯಪ್ರಕಾಶ ಹೆಗ್ಡೆಯವರ ಕಾಲೆಳೆದರು