ಅಕ್ರಮ ಗೋಮಾಂಸ ಸಾಗಾಟ: ಇಬ್ಬರ ಬಂಧನ

ಕುಂದಾಪುರ: ಕಾರಿನಲ್ಲಿ‌ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೈಂದೂರು ಪೊಲೀಸರು ಶನಿವಾರ ತಡರಾತ್ರಿ ಬಂಧಿಸಿದ್ದು, 40 ಸಾವಿರ ಮೌಲ್ಯದ 150 ಕೆ.ಜಿ. ದನದ ಮಾಂಸ ವಶಪಡಿಸಿಕೊಂಡಿದ್ದಾರೆ.

ಭಟ್ಕಳದ ಶೌಕತ್ ಅಲಿ ಸ್ಟ್ರೀಟ್ ನಿವಾಸಿ ಸೈಯದ್ ಮೊಸ್ಸಿನ್ ಲಂಕಾ (52), ಭಟ್ಕಳದ ಜಾಲಿ ಅಜಾದ್ ನಗರ ನಿವಾಸಿ ಇಷ್ತಿಯಾಕ್ ಅಹಮ್ಮದ್ ಇಕ್ಕೇರಿ (41) ಬಂಧಿತ ಆರೋಪಿಗಳು. ಬೈಂದೂರು ಸಮೀಪದ ಶಿರೂರು ಚೆಕ್ ಪೋಸ್ಟ್ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ‌ ದಾಖಲಾಗಿದೆ.

ಹಣ ಮಾಡುವ ಉದ್ದೇಶದಿಂದ ಆರೋಪಿಗಳನ್ನು ಜಾನುವಾರಗಳನ್ನು ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದು, ಅದನ್ನು ವಧೆಗೈದು ಮಾಂಸವನ್ನು ಕಾರಿನಲ್ಲಿ ತುಂಬಿಸಿಕೊಂಡು ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದರು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.