ಸುರತ್ಕಲ್: ಬಿಜೆಪಿ ಕಾರ್ಯಕರ್ತನಾಗಿದ್ದ ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿ ಪಿಂಕಿ ನವಾಜ್ ಎಂಬಾತನ ಮೇಲೆ ಇಂದು ಸಂಜೆ ತಂಡವೊಂದು ತಲವಾರು ದಾಳಿ ನಡೆಸಿದೆ.
ಸುರತ್ಕಲ್ ಕಾಟಿಪಳ್ಳ ಎರಡನೇ ಬ್ಲಾಕ್ ಎಂಬಲ್ಲಿ ಶಕೀಬ್ ಯಾನೆ ಶಬ್ಬು ಸೇರಿದಂತೆ ಇತರೆ ಐದಾರು ಮಂದಿ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಕಾಟಿಪಳ್ಳ ಪುಳಿತ್ತೂರು ನಾಗಬನದ ಬಳಿಯ ಲೇ ಔಟ್ ಸಮೀಪ ಸಾಗುತ್ತಿದ್ದ ಪಿಂಕಿ ನವಾಜ್ ನನ್ನು ತಂಡ ಬೆನ್ಬಟ್ಟಿ ತಲವಾರು ದಾಳಿ ನಡೆಸಿದೆ.
ಶಕೀಬ್ ನೇತೃತ್ವದ ತಂಡ ದಾಳಿ ನಡೆಸಿರುವುದನ್ನು ಪಿಂಕಿ ನವಾಜ್ ಖಚಿತಪಡಿಸಿದ್ದಾನೆ. ಕೃತ್ಯದಲ್ಲಿ ಭಾಗಿಯಾದವರ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.