ಉಡುಪಿ: ನಾಳೆ ಬಿಜೆಪಿ ಕಚೇರಿಯಲ್ಲಿ ಸಮರ್ಪಣಾ ದಿನ ಪುಷ್ಪಾರ್ಷನೆ- ನಿಧಿ ಅರ್ಪಣೆ

ಉಡುಪಿ: ರಾಜಕೀಯ ಕ್ಷೇತ್ರದಲ್ಲಿ ಸಚ್ಚಾರಿತ್ರ್ಯ, ದೇಶಭಕ್ತಿ, ಧ್ಯೇಯವಾದ, ಏಕಾತ್ಮ ಮಾನವತಾವಾದ ಹಾಗೂ ಉನ್ನತ ರಾಜಕೀಯ ಮೌಲ್ಯಗಳಿಗೆ ಮೇಲ್ಪಂಕ್ತಿಯಾಗಿ ಇಂದಿಗೂ ಪ್ರೇರಣೆ ನೀಡುತ್ತಿರುವ ಭಾರತೀಯ ಜನಸಂಘದ ಸ್ಥಾಪಕರಲ್ಲಿ ಓರ್ವರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಬಲಿದಾನ ದಿನ ಫೆಬ್ರವರಿ 11ರಂದು ಭಾರತೀಯ ಜನತಾ ಪಾರ್ಟಿಯ ವತಿಯಿಂದ ‘ಸಮರ್ಪಣಾ ದಿನವಾಗಿ’ ಆಚರಿಸಲಾಗುವುದು.

ಅದರಂತೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಾಳೆ (ಗುರುವಾರ) ಬೆಳಿಗ್ಗೆ 10 ಗಂಟೆಗೆ ಪಂಡಿತ್ ಜೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಬಿಜೆಪಿ ಚಟುವಟಿಕೆಗೆ ‘ಸಮರ್ಪಣಾ ನಿಧಿ’ ಅರ್ಪಣೆ ಹಾಗೂ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಿಧಿ ಅರ್ಪಣಾ ಕಾರ್ಯಕ್ರಮ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಪಕ್ಷದ ಎಲ್ಲಾ ಸ್ತರದ ಜನಪ್ರತಿನಿಧಿಗಳು, ಪದಾಧಿಕಾರಿಗಳು, ಹಿತೈಷಿಗಳು ಹಾಗೂ ಕಾರ್ಯಕರ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.