ನಾಲ್ಕು ವರ್ಷದ ಮಗನನ್ನು ಕತ್ತು ಹಿಸುಕಿ ಕೊಂದ ತಂದೆ

ರಾಯಚೂರು: ತಂದೆಯೇ ಮಗನನ್ನು ಕತ್ತು ಹಿಸುಕಿ ಕೊಂದ ಪೈಶಾಚಿಕ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಎಲೆಕೂಡ್ಲಗಿ ಗ್ರಾಮದ ಬಳಿ ನಡೆದಿದೆ.

ಎಲೆಕೂಡ್ಲಗಿ ಗ್ರಾಮದ ಯಲ್ಲಪ್ಪ ಎಂಬಾತ ಮಗನನ್ನು ಕೊಂದ ಕ್ರೂರಿ ತಂದೆ. ತವರು ಮನೆಗೆ ತೆರಳಿದ್ದ ಪತ್ನಿ ವಾಪಸ್ಸು ಬರದೇ ಇರುವುದಕ್ಕೆ ಪತ್ನಿ ಜೊತೆಗೆ ಜಗಳವಾಡಿದ ಯಲ್ಲಪ್ಪ ಕೋಪದಲ್ಲಿ ತನ್ನ ಮಗ ಮಹೇಶ್ (4)ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಮೃತ ಬಾಲಕನ ತಾಯಿ ಸದ್ಯ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಸಿಂಧನೂರ ಗ್ರಾಮೀಣ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕೊಲೆ ಆರೋಪಿ ಯಲ್ಲಪ್ಪನನ್ನು ಬಂಧಿಸಿದ್ದಾರೆ.