ಬೆಂಗಳೂರು: ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಸೋಮವಾರ(ಜ.18)ದಿಂದಲೇ ಜಾರಿಗೆ ಬರಲಿದೆ.
ಗೋ ಹತ್ಯೆ ಹಾಗೂ ಅಕ್ರಮ ಸಾಗಾಟ ಸಂಪೂರ್ಣ ನಿಷೇಧವಾಗುತ್ತದೆ. ರಾಜ್ಯದಲ್ಲಿ ರೈತರು, ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಗಣೆ ಮಾಡುವವರು ಗೊಂದಲಕ್ಕೀಡಾಗಬಾರದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ನಿಯಮಾವಳಿ ಏನು ಹೇಳುತ್ತೇ.?
ಜಾನುವಾರುಗಳ ಮಾಲೀಕರು ಮಾಲೀಕತ್ವದ ಪ್ರಮಾಣ ಪತ್ರ ಹೊಂದಿರಬೇಕು.
ಗೋವುಗಳ ಕಿವಿಗೆ ಹಾಕಿಸಿರುವ ಟ್ಯಾಗ್ ನಂಬರ್, ಮಾಲೀಕರ ಆಧಾರ್ ನಂಬರ್ ಜತೆಗೆ ಸ್ವತಃ ಪ್ರಮಾಣೀಕರಿಸಿದ ಪತ್ರ ಹೊಂದಿರಬೇಕು.
ಜಾನುವಾರು ಸಾಗಣೆಗೂ ಸಂಬಂಧಪಟ್ಟ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆದಿರಬೇಕು. ಇಲ್ಲದಿದ್ದರೆ ನಿಯಮದಲ್ಲಿರುವಂತೆ ಶಿಕ್ಷೆ ನಿಶ್ಚಿತ
6 ತಿಂಗಳ ಗರ್ಭಿಣಿ ಹಸುಗಳನ್ನು ಸಾಗಿಸುವಂತಿಲ್ಲ. ಪಶು ವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿಯೂ ಮಾಲೀಕತ್ವ ಪ್ರಮಾಣಪತ್ರ ಇರಬೇಕು.
ಜಾನುವಾರುಗಳ ಮಾಲೀಕರು ಮಾಲೀಕತ್ವದ ಪ್ರಮಾಣ ಪತ್ರ ಹೊಂದಿರಬೇಕು
ಗೋವುಗಳ ಕಿವಿಗೆ ಹಾಕಿಸಿರುವ ಟ್ಯಾಗ್ ನಂಬರ್, ಮಾಲೀಕರ ಆಧಾರ್ ನಂಬರ್ ಜತೆಗೆ ಸ್ವತಃ ಪ್ರಮಾಣೀಕರಿಸಿದ ಪತ್ರ ಹೊಂದಿರಬೇಕು
ಜಾನುವಾರು ಸಾಗಣೆಗೂ ಸಂಬಂಧಪಟ್ಟ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆದಿರಬೇಕು. ಇಲ್ಲದಿದ್ದರೆ ನಿಯಮದಲ್ಲಿರುವಂತೆ ಶಿಕ್ಷೆ ನೀಡಲಾಗುತ್ತದೆ.
ಕೃಷಿ ಅಥವಾ ಹೈನುಗಾರಿಕೆ ಉದ್ದೇಶಕ್ಕೆ ಸಾಗಣೆ ಮಾಡುವಾಗಲೂ ಸಾಗಣೆ ಪ್ರಮಾಣ ಪತ್ರ ಕಡ್ಡಾಯ.
15 ಕಿಮೀ ಒಳಗೆ ಸಾಗಿಸುವ ಸಂದರ್ಭದಲ್ಲಿ ಸಾಗಣೆ ಹಾಗೂ ಮಾಲೀಕತ್ವ ಪ್ರಮಾಣಪತ್ರ ಕಡ್ಡಾಯ.
6 ತಿಂಗಳ ಗರ್ಭಿಣಿ ಹಸುಗಳನ್ನು ಸಾಗಿಸುವಂತಿಲ್ಲ. ಪಶು ವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿಯೂ ಮಾಲೀಕತ್ವ ಪ್ರಮಾಣಪತ್ರ ಇರಬೇಕು.
ರಾತ್ರಿ 8 ರಿಂದ ಬೆಳಗ್ಗೆ 6 ಗಂಟೆಯ ತನಕ ಸಾಗಣೆ ಮಾಡುವಂತಿಲ್ಲ.
ಬೇಸಿಗೆ ಕಾಲದಲ್ಲಿ ಮಾರ್ಚ್ನಿಂದ ಮೇವರೆಗೆ ಮಧ್ಯಾಹ್ನ 11 ರಿಂದ 3 ಗಂಟೆಯ ತನಕ ಸಾಗಣೆ ಮಾಡುವಂತಿಲ್ಲ.
ವಾಹನದಲ್ಲಿ ಜಾನುವಾರುಗಳು ಎಷ್ಟಿರಬೇಕು ಎಂಬುದನ್ನೂ ನಿಗದಿಪಡಿಸಲಾಗಿದೆ.