ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್: ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಡಿಸಿ ಚಾಲನೆ

ಉಡುಪಿ: ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್ ನ ಪ್ರಥಮ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಂಗಳವಾರ ಉಡುಪಿ ಮಿತ್ರ ಆಸ್ಪತ್ರೆಯ ಬಳಿಯ ವಾದಿರಾಜ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಲಾಯಿತು.

ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್ ಕೋವಿಡ್ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಸಹಕಾರ ಕೊಟ್ಟಿದೆ. ಜಿಲ್ಲಾಡಳಿತಕ್ಕೆ ಅಗತ್ಯವಾಗಿ ಬೇಕಾದ ಆರೋಗ್ಯ ಉಪಕರಣಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸಿಕೊಟ್ಟಿದೆ. ಪ್ರಸ್ತುತ ಮೊದಲ ವರ್ಷವನ್ನು ಆಚರಿಸುತ್ತಿರುವ ಸಂಸ್ಥೆಯು ಮನ್ನಷ್ಟು ಅಭಿವೃದ್ಧಿಯನ್ನು ಹೊಂದಲಿ ಎಂದು ಹಾರೈಸಿದರು.

ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ  ಜಯ ಸಿ. ಕೋಟ್ಯಾನ್ ಶಿಬಿರದ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ ನೂರಾರು ಶಿಬಿರಾರ್ಥಿಗಳು ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಕೊಂಡರು.

ಪ್ರತಿ ಭಾನುವಾರ ಉಚಿತ ಶಿಬಿರ:
ಉಡುಪಿ ಹಾಗೂ ಮಂಗಳೂರು ಸೆಂಟರ್ ನಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 10ರಿಂದ 1ರ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಸಾರ್ವಜನಿಕರು ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್ ಸಂಸ್ಥೆ ತಿಳಿಸಿದೆ.