ಎಲ್ಲೆಡೆ ಸಂಕ್ರಾಂತಿ ಸಂಭ್ರಮ.ಸಂಕ್ರಾತಿ ಅಂದ್ರೆ ಮೊದಲು ನೆನಪಾಗುವುದೇ ಎಳ್ಳು ಬೆಲ್ಲದ ಜೊತೆ ಬಣ್ಣ ಬಣ್ಣದ ಸಕ್ಕರೆ ಅಚ್ಚು. ಈ ಹಬ್ಬದಲ್ಲಿ ಎಳ್ಳು ಬೆಲ್ಲದ ಜೊತೆಗೆ ಸಕ್ಕರೆ ಅಚ್ಚುಗಳನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿದ ನಂತರ ಅದನ್ನು ಬಂಧು ಬಳಗದವರಿಗೆ ಹಂಚುತ್ತೇವೆ. ಸಕ್ಕರೆ ಅಚ್ಚುಗಳನ್ನು ಮನೆಯಲ್ಲಿ ಮಾಡುವುದು ಕಷ್ಟ ಅಂತ ಹೊರಗಡೆ ಅಂಗಡಿಗಳಿಂದ ಅದನ್ನು ಕೊಂಡುಕೊಂಡು ಬರುತ್ತೇವೆ. ಬಣ್ಣ ಬಣ್ಣದ, ವಿವಿಧ ಆಕಾರಗಳ ಸಕ್ಕರೆ ಗೊಂಬೆಗಳು ನಮಗೆ ಮಾರುಕಟ್ಟೆಯಲ್ಲಿ ನಮಗೆ ಬೇಕಾದಷ್ಟು ಸಿಗುತ್ತವೆ. ಆದರೆ ಹೊರಗಡೆ ಸಕ್ಕರೆ ಗೊಂಬೆಗಳನ್ನು ಕೊಂಡುಕೊಳ್ಳುವ ಮುಂಚೆ ಸ್ವಲ್ಪ ಎಚ್ಚರವಿರಲಿ.ಯಾಕೆ ಅನ್ನೋ ಕಾರಣ ಹೇಳಿದ್ದಾರೆ ಸುಲಭಾ ಆರ್ ಭಟ್ ಅವರು.
ಪೇಟೆಯ ಸಕ್ಕರೆ ಗೊಂಬೆಗಳಿಂದ ದೂರವಿರಿ:
ಪೇಟೆಯಲ್ಲಿ ಈ ಸಕ್ಕರೆ ಗೊಂಬೆಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂಬುದು ಎಷ್ಟು ಮಂದಿಗೆ ಗೊತ್ತಿದೆ? ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ ಎಂದರೆ ಸಕ್ಕರೆ ಗೊಂಬೆಗಳನ್ನು ತಯಾರಿಸುವಾಗ ಅವುಗಳಿಗೆ ಬಳಸುವ ಕಲರ್ ತುಂಬಾನೇ ಡೇಂಜರ್. ಅದರಲ್ಲಿ ಕಾನ್ಸರ್ ಉಂಟು ಮಾಡುವ ಅಪಾಯಕಾರಿ ಕೆಮಿಕಲ್ಗಳಿರುತ್ತದೆ. ಕಾನೂನಿನ ಪ್ರಕಾರ ಸಕ್ಕರೆ ಗೊಂಬೆಗಳನ್ನು ಮಾಡಲು ಕೇವಲ ಆರು ಬಣ್ಣಗಳನ್ನು ಮಾತ್ರ ಬಳಸಬೇಕು.
ಅದು ಪಾಂಟ್ ಫಯ್ ಎಮ್ ಎಲ್ ಮಾತ್ರ. ಮೆಟಾಲಿಕ್ ಎಲ್ಲೋ, ಲೆಮನ್ ಎಲ್ಲೋ ಹೀಗೆ ಹಲವಾರು ಆರ್ಟಿಫಿಷಿಯಲ್ ಕಲರ್ಗಳು ಹಲವು ರೋಗಗಳಿಗೆ ಕಾರಣವಾಗುತ್ತದೆ. ಪಾಂಟ್ ಫಯ್ ಎಮ್ ಎಲ್ಗಿಂತ ಹೆಚ್ಚು ಪ್ರಮಾಣದಲ್ಲಿ ಕಲರ್ಗಳನ್ನು ಬಳಸಿದರೆ ಆರೋಗ್ಯ ಕೆಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಸಕ್ಕರೆ ಗೊಂಬೆಗಳಲ್ಲಿ ಸಿಹಿ ಹೆಚ್ಚಾಗಿರುವುದರಿಂದ ಇವುಗಳಿಗೆ ನೊಣಗಳು ಮೆತ್ತಿಕೊಳುವುದು ಬಹುಬೇಗ. ಅಲ್ಲದೇ ಅನ್ಹೈಜಿನಿಕ್ ಕಂಡೀಷನ್ನಲ್ಲಿ ತಯಾರು ಮಾಡಲಾಗುತ್ತದೆ ಮತ್ತು ಸಕ್ಕರೆಯು ಕಳಪೆ ಗುಣಮಟ್ಟು ಆಗಿರುವುದರಿಂದ ಇದು ನಮ್ಮ ಆರೋಗ್ಯದ ಪಾಲಿಗೆ ಕಹಿಯಾಗಿ ಬಿಡುತ್ತದೆ. ಈ ಸಕ್ಕರೆ ಗೊಂಬೆಗಳು ನೋಡಲು ಬಲು ಸುಂದರವಾಗಿರುತ್ತದೆ ಆದರೆ ಅದು ತಯಾರಿಸುವುದು ಹಾದಿ ಬೀದಿಗಳಲ್ಲಿ. ನೋಣ,ಜೀರಳೆ ಹುಳಹುಪ್ಪಟೆಗಳಲ್ಲಾ ಈ ಸಕ್ಕರೆ ಪಾಕದಲ್ಲಿ ಸೇರಿರುತ್ತದೆ.
ನಾವೇನೋ ಅದನ್ನು ಫ್ರೆಶ್ ಆಗಿ ಖರೀದಿ ಮಾಡಿ ದೇವರ ಮುಂದೆ ಇಟ್ಟು ಮನೆಮಂದಿಗೆಲ್ಲಾ ಹಂಚಿ, ಹಬ್ಬದಲ್ಲಿ ಸಿಹಿ ಹಂಚಿದ್ದೇವೆ ಎಂದು ಖುಷಿ ಪಡುತ್ತೇವೆ. ಆದರೆ ನಮಗೆ ಗೊತ್ತಿಲ್ಲದಂತೆ ನಾವು ಹಂಚಿದ ಸಕ್ಕರೆ ಅಚ್ಚಿನಲ್ಲಿರುವ ವಿಷಕಾರಕ ಅಂಶ ನಮ್ಮ ಆತ್ಮೀಯರ ಹೊಟ್ಟೆ ಸೇರಿರುತ್ತದೆ. ಇದು ಸಕ್ಕರೆ ಗೊಂಬೆಗಳಲ್ಲಿರುವ ಕಹಿ ಸತ್ಯ.
ಮಾರುಕಟ್ಟೆಯಲ್ಲಿ ದೊರೆಯುವ ವಿಷಕಾರಿ ಸಕ್ಕರೆ ಅಚ್ಚುಗಳಿಂದ ದೂರವಿರಲು ನಮಗಿರುವುದು ಒಂದೇ ಮಾರ್ಗ. ನಮ್ಮ ಅಜ್ಜಿ ಅಮ್ಮ ಮಾಡುವ ಸಂಕ್ರಾಂತಿ ರೆಸಿಪಿಗಳನ್ನು ಮತ್ತೇ ನೆನಪಿಸಿಕೊಂಡು ಅದನ್ನು ಅನುಸರಿಸಿದರೆ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ,ಆರೋಗ್ಯಕರವಾಗಿ ಆಚರಣೆ ಮಾಡಬಹುದು.
ಆರೋಗ್ಯಗಿಂತ ನಿಮ್ಮ ಶ್ರಮ ಮತ್ತು ಸಮಯ ಹೆಚ್ಚಾ ಎಂದು ಒಂದು ಸಲ ಯೋಚನೆ ಮಾಡಿದರೆ ಸಕ್ಕರೆ ಅಚ್ಚುಗಳನ್ನು ಸುಲಭವಾಗಿ ಮನೆಯಲ್ಲಿ ಹೀಗೆ ತಯಾರಿಸಬಹುದು.
ಎಲ್ಲರಿಗೂ ಅಚ್ಚುಮೆಚ್ಚು ಮನೇಲಿ ಮಾಡೋ ಸಕ್ರೆ ಅಚ್ಚು:
ಸಕ್ಕರೆ,ಮೊಸರು,ಹಾಲು.ಕಲ್ಲು ಸಕ್ಕರೆ, ಜೀಲೇಬಿ ಬಣ್ಣ
ಮಾಡುವ ವಿಧಾನ: ಒಂದು ಬಾಣಲೆಗೆ ಸಕ್ಕರೆ ಹಾಕಿ ಅದಕ್ಕೆ ಸಕ್ಕರೆ ಮುಳುಗುವಷ್ಟು ನೀರು ಸೇರಿಸಿ. ಸ್ವಲ್ಪ ಸಕ್ಕರೆ ಕರಗಿದ ನಂತರ ಕಲ್ಲು ಸಕ್ಕರೆಯನ್ನು ಸೇರಿಸಿ.(ಕಲ್ಲು ಸಕ್ಕರೆ ಹಾಕುವುದರಿಂದ ಸಕ್ಕರೆಗೊಂಬೆಗಳು ಗಟ್ಟೆಯಾಗಿರುತ್ತದೆ ಮತ್ತು ಶೈನಿಂಗ್ ಇರುತ್ತದೆ) ನಂತರ ಇದಕ್ಕೆ ಸ್ವಲ್ಪ ಹಾಲನ್ನು ಸೇರಿಸಿ. ಕುದಿ ಬಂದನಂತರ ಶುದ್ಧವಾದ ಬಟ್ಟೆಯಲ್ಲಿ ಸೋಸಿಕೊಳ್ಳಿ ಆದಾದನಂತರ ಮತ್ತೇ ಅದನ್ನು ಬಾಣಲೆಯಲ್ಲಿ ಹಾಕಿ ಪಾಕ ಬರಿಸಿಕೊಳ್ಳಿ. ಇದಕ್ಕೆ ಮೋಸರು ಹಾಕಿ ಪಾಕ ಗಟ್ಟಿಯಾಗುವ ತನಕ ಕಲಿಸಿ. ಇದಕ್ಕೆ ಕೇಸರಿ ಅಥವಾ ನೈಸರ್ಗಿಕ ಬಣ್ಣಗಳನ್ನುವಿವಿಧ ಆಕೃತಿಯ ಸಕ್ಕರೆ ಅಚ್ಚುಗಳಿಗೆ ಸುರಿಯಿರಿ.(ಪಾಸ್ಟಿಕ್ ಅಚ್ಚುಗಳಿಗಿಂತ ಮರದ ಅಚ್ಚುಗಳನ್ನು ಬಳಸಿ) ಸ್ವಲ್ಪ ಹೊತ್ತಿನ ನಂತರ ನಿಧಾನವಾಗಿ ತೆಗೆಯಿರಿ .ಶುದ್ಧವಾದ ಶುಚಿಯಾದ ಸಕ್ಕರೆಗೊಂಬೆಗಳು ಈಗ ಸಿದ್ದ.