ಇಂಡೋನೇಷ್ಯಾದ ಡೊಮೆಸ್ಟಿಕ್ ವಿಮಾನ ನಾಪತ್ತೆ

ನವದೆಹಲಿ: ಇಂಡೋನೇಷ್ಯಾದ ಶ್ರೀವಿಜಯ ಏರ್ ಎಸ್ ಜಿ 182 ಎಂಬ ಡೊಮೆಸ್ಟಿಕ್ ವಿಮಾನ ನಾಪತ್ತೆಯಾಗಿದೆ.

ಜಕಾರ್ತದಿಂದ ಹೊರಟಿದ್ದ ವಿಮಾನವು ಟೇಕ್​ಆಫ್​ ಆದ ಕೆಲವೇ ಕ್ಷಣದಲ್ಲಿ ವಿಮಾನ ಸಂಪರ್ಕ ಕಳೆದುಕೊಂಡಿದೆ.

ಈ ವಿಮಾನದಲ್ಲಿ ಆರು ಮಕ್ಕಳು ಸಹಿತ 59 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಈ ವಿಮಾನ ಶನಿವಾರ ಸೂಕರ್ನೊ-ಹಟ್ಟಾ ವಿಮಾನ ನಿಲ್ದಾಣದಿಂದ ಟೇಕ್​ಆಫ್​ ಆಗಿತ್ತು. ಈ ವಿಮಾನ ಸಂಪರ್ಕ ಕಳೆದುಕೊಂಡು ಸಮುದ್ರಕ್ಕೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ವಿಮಾನಕ್ಕಾಗಿ ರಕ್ಷಣಾಪಡೆ ಹುಡುಕಾಟ ಆರಂಭಿಸಿದೆ.

ಜಕಾರ್ತದಿಂದ ಹೊರಟ ವಿಮಾನ ನಾಲ್ಕು ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿದೆ. ಕೇವಲ ಒಂದೇ ನಿಮಿಷದಲ್ಲಿ 10 ಸಾವಿರ ಅಡಿ ವಿಮಾನ ಕುಸಿತ ಕಂಡಿದೆ ಎಂದು ತಿಳಿದು ಬಂದಿದೆ.