ಮಣಿಪಾಲ ಮಹಿಳಾ ಸಮಾಜ ಸಂಸ್ಥೆಯಿಂದ ಇಬ್ಬರು ಮಹಿಳೆಯರಿಗೆ ಹೊಲಿಗೆಯಂತ್ರ ಹಸ್ತಾಂತರ

ಉಡುಪಿ: ಮಣಿಪಾಲ ಮಹಿಳಾ ಸಮಾಜ ಸಂಸ್ಥೆಯ ವತಿಯಿಂದ ಕೊರೊನಾ ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಉಡುಪಿ ಮೂಡುಬೆಟ್ಟುವಿನ ವಿಜಯಲಕ್ಷ್ಮಿ ಹಾಗೂ ಎರ್ಮಾಲ್ ನಿವಾಸಿ ಪೂಜಾ ಎಸ್. ಅವರಿಗೆ ಹೊಲಿಗೆ ಯಂತ್ರವನ್ನು ಹಸ್ತಾಂತರಿಸಲಾಯಿತು.

ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ದೀಪಾ ಭಂಡಾರಿ ಹಾಗೂ ಕೋಶಾಧಿಕಾರಿ ಪೂರ್ಣಿಮಾ ಶೆಟ್ಟಿ ಅವರು ಉಡುಪಿ ರಾಜ್ ಟವರ್ ನಲ್ಲಿರುವ ಮೇಘ ಎಂಟರ್ಪ್ರೈಸಸ್ ನಲ್ಲಿ ಸಾಂಕೇತಿಕವಾಗಿ ಹೊಲಿಗೆ ಯಂತ್ರವನ್ನು ಹಸ್ತಾಂತರ ಮಾಡಿದರು.

ಸಂಸ್ಥೆಯು ಹಲವಾರು ವರ್ಷಗಳಿಂದ ನಿರುದ್ಯೋಗಿ ಮಹಿಳೆಯರಿಗೆ ಹಾಗೂ ಮೂಲಭೂತ ಸೌಕರ್ಯ ಇಲ್ಲದವರಿಗೆ ಸಹಾಯ ಹಸ್ತ ನೀಡುತ್ತಾ ಬಂದಿದೆ.