ಕಾರ್ಕಳ: ಇಲ್ಲಿನ ಪ್ರಸಿದ್ಧ ಅತ್ತೂರು ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಜನವರಿ 18ರಿಂದ 28ರ ವರೆಗೆ ನಡೆಯಲಿದೆ.
ಜ.17 ರಿಂದ ಸಂತ ಲಾರೆನ್ಸರ ನವೇನಾ ಪ್ರಾರ್ಥನೆ ಆರಂಭವಾಗಲಿದೆ. ಬೆಳಿಗ್ಗೆ 8ಗಂಟೆಗೆ ಬಲಿಪೂಜೆ ಬಳಿಕ ನವೇನಾ ಪ್ರಾರ್ಥನೆ ನಡೆಯಲಿದ್ದು, ಪ್ರಾರ್ಥನೆಗೆ ಕೋರಿಕೆಗಳು, ಮಹೋತ್ಸವಕ್ಕೆ ಫಿರ್ಜೆಂತ್ ಹಾಗೂ ಮಡ್ದೊಮ್ ಗಳನ್ನು ಮುಂಚಿತವಾಗಿ ಕಳುಹಿಸಿಕೊಡಬೇಕು ಎಂದು ಕೋರಲಾಗಿದೆ.
ವಿಶೇಷ ಸೂಚನೆ:
ಈ ಬಾರಿಯ ಮಹೋತ್ಸವ ಕೋವಿಡ್ ನಿಮಯಾವಳಿಯಂತೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರುವುದನ್ನು ನಿಷೇಧಿಸಲಾಗಿದೆ.
*ಜನಸಂದಣಿ ಕಡಿಮೆಗೊಳಿಸುವ ಸಲುವಾಗಿ ಭಕ್ತಾಧಿಗಳು ಜ. 18ರಿಂದಲೇ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವಂತೆ ವಿನಂತಿಸಲಾಗಿದೆ.
*ಭಕ್ತಾದಿಗಳ ಆಧ್ಯಾತ್ಮಿಕ ಒಳಿತಿಗಾಗಿ ಜ. 18ರಿಂದ ಪ್ರತಿದಿನ ಐದು ಬಲಿಪೂಜೆಗಳು ನೆರವೇರಲಿದ್ದು, ಬೆಳಿಗ್ಗೆ 8 ಗಂಟೆಗೆ ಪ್ರಥಮ ಹಾಗೂ ಕೊನೆಯ ಬಲಿಪೂಜೆ 5 ಗಂಟೆಗೆ ನಡೆಯಲಿದೆ.
*ಬಲಿಪೂಜೆಯಲ್ಲಿ 200 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
*ಮಹೋತ್ಸವದ ದಿನಗಳಲ್ಲಿ ಸಂಜೆಯ ಬಲಿಪೂಜೆ ಬಳಿಕ ಅಂದರೆ ಸಂಜೆ 6.30ರಿಂದ ಮರುದಿನ ಬೆಳಿಗ್ಗೆ 7ಗಂಟೆಯವರೆಗೆ ಪುಣ್ಯಕ್ಷೇತ್ರದ ವಠಾರದಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
*ಹರಕೆಯ ಮೇಣದ ಬತ್ತಿಗಳು ಹಾಗೂ ಧಾರ್ಮಿಕ ವಸ್ತುಗಳ ಸ್ಟಾಲ್ ಹೊರತುಪಡಿಸಿ ಇತರೆ ಯಾವುದೇ ಸ್ಟಾಲ್ ಇರುವುದಿಲ್ಲ.