ಟಿಆರ್ ಪಿ ತಿರುಚಲು ಲಕ್ಷಗಟ್ಟಲೆ ಹಣಕೊಟ್ಟ ಅರ್ನಬ್ ಗೋಸ್ವಾಮಿ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬಾರ್ಕ್​ ಮಾಜಿ ಸಿಇಒ

ಮುಂಬೈ: ಟಿಆರ್​ಪಿ ತಿರುಚಿದ ಪ್ರಕರಣಕ್ಕೆ ಇದೀಗ ಬಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣದಲ್ಲಿ ರಿಪಬ್ಲಿಕ್​ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ.

ಸೋಮವಾರದಂದು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ರಿಪಬ್ಲಿಕ್​ ಟಿವಿ ವಾಹಿನಿಯ ಮಾಲೀಕರು
ಬಾರ್ಕ್​ ಸಂಸ್ಥೆಯ ಮಾಜಿ ಸಿಇಓ ಪಾರ್ಥೋ ದಾಸ್​ಗುಪ್ತಾ ಅವರಿಗೆ ಲಕ್ಷಗಟ್ಟಲೆ ಹಣ ಪಾವತಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಅರ್ನಬ್​ ಗೋಸ್ವಾಮಿ ಹೆಸರು ನೇರವಾಗಿ ಪ್ರಸ್ತಾಪವಾಗಿಲ್ಲವಾದರೂ ರಿಪಬ್ಲಿಕ್​ ಟಿವಿ ವಾಹಿನಿಯ ಮಾಲೀಕರು ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಆಪಾದಿಸಲಾಗಿದೆ. ಆದರೆ, ಹೇಳಿಕೆಯ ಮುಂದುವರಿದ ಭಾಗದಲ್ಲಿ ಮುಂಬೈ ಪೊಲೀಸರು ಅರ್ನಬ್​ ಗೋಸ್ವಾಮಿ ಹೆಸರನ್ನು ಉಲ್ಲೇಖಿಸಿದ್ದಾರೆ.

ಅರ್ನಬ್​ ಮತ್ತು ದಾಸ್​ಗುಪ್ತಾ ಇಬ್ಬರೂ ರಿಪಬ್ಲಿಕ್ ಟಿವಿಯ ಟಿಆರ್​ಪಿ ಹೆಚ್ಚಳದಲ್ಲಿ ಅಕ್ರಮ ಎಸಗಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.