ಅಂತರ್ಧಮೀಯ ಯುವತಿಯೊಂದಿಗೆ ಪಾದ್ರಿ ಪರಾರಿ.!

ಬಳ್ಳಾರಿ: ಚರ್ಚ್ ವೊಂದರ ಧರ್ಮ ಸಂದೇಶ ನೀಡಬೇಕಿದ್ದ ಪಾದ್ರಿಯೊಬ್ಬರು ಅಂತರ್ಧಮೀಯ ಯುವತಿಯೊಂದಿಗೆ ಪರಾರಿಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಯುವತಿಯೊಂದಿಗೆ ಪರಾರಿಯಾದ ಪಾದ್ರಿಯನ್ನು ರವಿಕುಮಾರ್ (54) ಎಂದು ಗುರುತಿಸಲಾಗಿದ್ದು, ಈತ 24 ವರ್ಷದ ಯುವತಿಯೊಂದಿಗೆ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದುಬಂದಿದೆ.

ಅನ್ಯ ಧರ್ಮದ ಯುವತಿ ಇಂಜಿನಿಯರಿಂಗ್ ಮುಗಿಸಿದ್ದಳು. ಧರ್ಮ ಬೇರೆ ಆದರೂ ಸ್ನೇಹಿತೆ ಜೊತೆ ಪ್ರತಿ ಭಾನುವಾರ ಚರ್ಚ್​ಗೆ ಹೋಗುತ್ತಿದ್ದಳು ಎನ್ನಲಾಗಿದೆ. ಆಗ ಪಾದ್ರಿಯೊಂದಿಗೆ ಯುವತಿಗೆ ಆತ್ಮೀಯತೆ ಬೆಳೆದಿದ್ದು, ಈ ಸ್ನೇಹವನ್ನೆ ಎನ್ ಕ್ಯಾಶ್ ಮಾಡಿಕೊಂಡ ಪಾದ್ರಿ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಇದೀಗ ಮಗಳನ್ನು ಹುಡುಕಿಕೊಡುವಂತೆ ಯುವತಿ ಪೋಷಕರು ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಅಲ್ಲದೆ, ಫಾಸ್ಟರ್ ವಿರುದ್ಧ ಯುವತಿಯ ಪೋಷಕರು ಬಳ್ಳಾರಿ ಎಸ್​ಪಿಗೆ ಕೂಡ ದೂರು ಸಲ್ಲಿಸಿದ್ದಾರೆ. ಜೊತೆಗೆ ಯುವತಿ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಈ ಫಾಸ್ಟರ್ ರವಿಕುಮಾರ್ ಚರ್ಚ್​ಗೆ ಬರ್ತಿದ್ದ ಯುವತಿಯರನ್ನೆಲ್ಲಾ ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ. ಈಗಾಗಲೇ ಸಾಕಷ್ಟು ಯುವತಿಯರಿಗೆ ಈ ರೀತಿ ಮಾಡಿದ್ದಾನೆ ಅಂತಾ ಆರೋಪಿಸಿದ್ದಾರೆ.

ತಮ್ಮ ಮಗಳ ದಾಖಲಾತಿಗಳನ್ನ ಪಡೆದು ಅಕೌಂಟ್​ನಲ್ಲಿದ್ದ ಹಣ ಕೂಡ ಪಡೆದ್ದಿದ್ದಾನೆಂದು ಆರೋಪಿಸುತ್ತಿದ್ದಾರೆ. ಆರೋಪಿ ಈಗಾಗಲೇ ಇಬ್ಬರನ್ನು ಮದುವೆಯಾಗಿರುವುದಾಗಿ ಗೊತ್ತಾಗಿದೆ. ಹೀಗಾಗಿ ನಮ್ಮ ಮಗಳನ್ನ ನಮಗೆ ಒಪ್ಪಿಸಿ, ಫಾಸ್ಟರ್​ನಿಂದ ಮಗಳನ್ನ ಬಚಾವ್ ಮಾಡಿ ಅಂತಾ ಯುವತಿಯರ ಪೋಷಕರು ಮಹಿಳಾ ಪೊಲೀಸ್ ಠಾಣೆಗೆ ಹಾಗೂ ಎಸ್​ಪಿಗೆ ದೂರು ನೀಡಿದ್ದಾರೆ.

ಈಗಾಗಲೇ ಯುವತಿ ನಾಪತ್ತೆಯಾಗಿ 1 ವಾರ ಕಳೆದಿದೆ ಆದರೂ ಸುಳಿವಿಲ್ಲ. ಮತ್ತೊಂದೆಡೆ ಈ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಧರ್ಮಸಂದೇಶ ನೀಡಬೇಕಾದ ವ್ಯಕ್ತಿ ಈ ರೀತಿ ಮಾಡಿರುವ ಆರೋಪ ಕೇಳಿಬಂದಿರೋದು ಜನರನ್ನ ರೊಚ್ಚಿಗೆಬ್ಬಿಸಿದೆ.