ಕೇರಳ: ಡ್ಯಾಂ ನೀರಿನಲ್ಲಿ ಮುಳುಗಿ ಮಲಯಾಳಂ ಖ್ಯಾತ ನಟ ಅನಿಲ್ ನೆಡುಂಗಾಡ್ ಮೃತಪಟ್ಟ ದಾರುಣ ಘಟನೆ ಕೇರಳದ ತೊಡುಪುಳದಲ್ಲಿ ಸಂಭವಿಸಿದೆ.
ಇವರು ಚಿತ್ರೀಕರಣದ ಬಿಡುವಿನ ವೇಳೆ ಡ್ಯಾಂಗೆ ಸ್ನಾನ ಮಾಡಲು ಹೋಗಿದ್ದರು. ಮಲನ್ಕರ್ ಡ್ಯಾಂ ಬಳಿ ಮಲಯಾಳಂ ಸಿನಿಮಾ ‘ಪೀಸ್’ ನ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಅನಿಲ್ ಹಾಗೂ ಕೆಲವರು ಸ್ನಾನ ಮಾಡಲೆಂದು ಮಲನ್ಕರ ಡ್ಯಾಂ ಗೆ ಹೋಗಿದ್ದರು, ಈ ವೇಳೆ ಅನಿಲ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕೂಡಲೇ ಸ್ನೇಹಿತರು ಅನಿಲ್ ನ ರಕ್ಷಣೆಗೆ ಹುಡುಕಾಟ ನಡೆಸಿದ್ದಾರೆ. ಆದರೆ ಅವರು ಪತ್ತೆಯಾಗಿಲ್ಲ. ರಕ್ಷಣಾ ತಂಡದವರು ಬಂದು ಕಾರ್ಯಾಚರಣೆ ನಡೆಸಿದಾಗ ಸಂಜೆ ಅವರ ಮೃತದೇಹ ಸಿಕ್ಕಿದೆ. ಅನಿಲ್ ಅವರು ಕೊನೆಯದಾಗಿ ಪಾಪಮ್ ಚೆಯ್ಯತವರ್ ಕಲ್ಲೆರಿಯತ್ತೆ’ ಚಿತ್ರದಲ್ಲಿ ಅಭಿನಯಿಸಿದ್ದರು.