ಉಡುಪಿ: ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ- 1 ಹಾಗೂ ಆರ್ ಎಎಚ್ -1 ಸಹಯೋಗದಲ್ಲಿ ‘ಕೆನರಾ ಗೃಹ ಸಾಲ ಮೇಳ 2020’ ಬೃಹತ್ ಗೃಹ ಸಾಲಮೇಳ ಕಾರ್ಯಕ್ರಮ ಡಿಸೆಂಬರ್ 15 ಮತ್ತು 16ರಂದು ಬೆಳಿಗ್ಗೆ 10ರಿಂದ 5ಗಂಟೆಯವರೆಗೆ ಉಡುಪಿ ಕೋರ್ಟ್ ರೋಡ್ ನಲ್ಲಿರುವ ಪ್ರಾದೇಶಿಕ ಕೆನರಾ ಬ್ಯಾಂಕ್ ಕಚೇರಿಯಲ್ಲಿ ನಡೆಯಲಿದೆ.
ಏನೇನಿದೆ ವಿಶೇಷ ಆಫರ್.?
*ಶೇ. 6.90 ಬಡ್ಡಿದರದಲ್ಲಿ ಗೃಹ ಸಾಲ
*ಜಾಮೀನು ರಹಿತ ಸಾಲ
*ಮುಂಗಡ ಪಾವತಿ ಶುಲ್ಕವಿಲ್ಲ
*ಆಕರ್ಷಕ ದರದಲ್ಲಿ ಸುಲಭ ಸಾಲ
*ಸಾಲ ವರ್ಗಾವಣೆ ಮತ್ತು ಟಾಪ್ಅಪ್ ಸೌಲಭ್ಯ
*ಆದಾಯ ತೆರಿಗೆ ವಿನಾಯಿತಿ
*30 ವರ್ಷ ಗರಿಷ್ಠ ಮರುಪಾವತಿ ಅವಧಿ
*ಯಾವುದೇ ಗುಪ್ತ ಶುಲ್ಕವಿಲ್ಲ
ಸ್ಥಳದಲ್ಲೇ ಸಾಲ ಮಂಜೂರು:
ಸ್ಥಳದಲ್ಲೇ ಸಾಲದ ಮಂಜೂರಾತಿಗೆ ಪಾನ್ ಕಾರ್ಡ್, ಆಧಾರ್ ಕಾರ್ಡ್, 3 ವರ್ಷದ ಐಟಿ ರಿಟರ್ನ್, ಸ್ಯಾಲರಿ ಸ್ಲಿಪ್ ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಈ ಸಾಲಮೇಳದಲ್ಲಿ ಉಡುಪಿ ಹಾಗೂ ಮಣಿಪಾಲದ ಹೆಸರಾಂತ ಬಿಲ್ಡರ್ ಗಳು ಭಾಗವಹಿಸಲಿದ್ದಾರೆ.