ಮಣಿಪಾಲ: ಇಲ್ಲಿನ ಸರಳೇಬೆಟ್ಟು ನೆಹರು ನಗರ ನಿವಾಸಿ ಕೆಎಂಸಿ ಆಸ್ಪತ್ರೆಯ ಜನರೇಟರ್ ಸೆಕ್ಷನ್ ನಲ್ಲಿ ಮೆಕ್ಯಾನಿಕ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ತೋಮ ಪೂಜಾರಿ (85) ಇಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಅವರು ಮಣಿಪಾಲದ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಸಮಿತಿಯ ಹಿರಿಯ ಪರಿಚಾರಕರಾಗಿ ಕಾರ್ಯನಿರ್ವಹಿಸಿಸುತ್ತಿದ್ದರು. ಪತ್ನಿ, ಓರ್ವ ಪುತ್ರ, ನಾಲ್ಕು ಪುತ್ರಿಯರನ್ನು ಅಗಲಿದ್ದಾರೆ.












