ಉಡುಪಿ: ಶಾಸಕ ಕೆ. ರಘುಪತಿ ಭಟ್ ಅವರ ವಿಶೇಷ ಮುತುವರ್ಜಿ ಹಾಗೂ ಸ್ಥಳೀಯ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಅವರ ಮನವಿಯ ಮೇರೆಗೆ ಮಂಜೂರಾದ ಮಣಿಪಾಲ ಈಶ್ವರನಗರ ವಾರ್ಡ್ ನ ಎಂಟನೇ ಮತ್ತು ಒಂಬತ್ತನೇ ಅಡ್ಡ ರಸ್ತೆಯ ಸುಮಾರು 475 ಮೀಟರ್ ಉದ್ದದ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಗುರುವಾರ ಚಾಲನೆ ನೀಡಿದರು.
ಬೂತ್ ಅಧ್ಯಕ್ಷ ಗಿರೀಶ್, ಜಿಲ್ಲಾ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಸಹಸಂಚಾಲಕ ಸುಬ್ರಮಣ್ಯ ಪೈ, ಮಹಿಳಾ ಮೋರ್ಚಾ ಕೋಶಾಧಿಕಾರಿ ಮಾಯಾ ಕಾಮತ್, ನಗರ ಶಿಕ್ಷಣ ಸಂಸ್ಥೆಗಳ ಪ್ರಕೋಷ್ಠದ ಸಂಚಾಲಕ ಹರೀಶ್ ಜಿ ಕಲ್ಮಾಡಿ, ಸಾಂಸ್ಕ್ರತಿಕ ಪ್ರಕೋಷ್ಠ ಸಂಚಾಲಕ ಶ್ರೀನಾಥ್ ಮಣಿಪಾಲ, ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸತೀಶ್ ಸಾಲಿಯಾನ್, ವಾರ್ಡ್ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂದ್ಯಾ ಪೈ, ಸ್ಥಳೀಯರಾದ ಸುಧಾಕರ್ ನಾಯ್ಕ, ಶೀಲಾ, ಜನಾರ್ಧನ್ ನಾಯಕ್, ಗುತ್ತಿಗೆದಾರರಾದ ಮಹೇಶ್ ಪಿ. ಹಾಜರಿದ್ದರು.