ಕಾರ್ಕಳ: ಅಷ್ಟಮಂಗಲದಲ್ಲಿ ಪರ್ಪಲೆಗಿರಿ ಬೆಟ್ಟದ ಪೂರ್ವದಲ್ಲಿನ ಪುರಾತನ ಗುಹೆಯ ಉಲ್ಲೇಖ

ಕಾರ್ಕಳ: ಹಿಂದೂ ಜಾಗರಣ ವೇದಿಕೆ ಕಾರ್ಕಳ ಹಾಗೂ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿ ಪುನರುತ್ಥಾನದ ಅಂಗವಾಗಿ ಖ್ಯಾತ ದೈವಜ್ಞರಾದ ನಾರಾಯಣ ಪೊದುವಾಳ್ ಮತ್ತು ಹಿರಿಯ ಧಾರ್ಮಿಕ ಚಿಂತಕರಾದ ಹಿರಣ್ಯ ವೆಂಕಟೇಶ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಬೆಟ್ಟದ ಪೂರ್ವದಲ್ಲಿ ಇರುವ ಪುರಾತನ ಗುಹೆಯ ಉಲ್ಲೇಖವಾಗಿದೆ.

ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಉಲ್ಲೇಖವಾದ ಬೆಟ್ಟದ ಪೂರ್ವ ಭಾಗದಲ್ಲಿರುವ ಗುಹೆಯ ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಇಂದು ಭೇಟಿ ನೀಡಿದರು.

ಅಷ್ಟಮಂಗಲದಲ್ಲಿ ತಿಳಿದ ಮಾಹಿತಿಯಂತೆ ಬೆಟ್ಟದ ಪೂರ್ವಭಾಗದಲ್ಲಿ ಕಾಡಿನೊಳಗೆ ಇರುವ ಗುಹೆಯ ಸ್ಥಳಕ್ಕೆ ಕಾರ್ಯಕರ್ತರು ತೆರಳಿದ್ದಾರೆ. ಈ ಗುಹೆ ಬೃಹತ್ ಆಕಾರವಾಗಿದ್ದು, ಸುಮಾರು 50ರಿಂದ 100 ಜನ ಸೇರುವಷ್ಟು ವಿಶಾಲವಾಗಿದೆ. ಈ ಗುಹೆ ಕಾಂತಾವರ ಸಮೀಪದವರೆಗೆ ವಿಸ್ತರಣೆಗೊಂಡಿದೆ ಎಂಬ ಪ್ರತೀತಿ ಕೂಡ ಇದೆ ಎನ್ನಲಾಗಿದೆ.