ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ನ ಶಕ್ತಿ. ಅವರು ಓರ್ವ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿದ್ದು, ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಕಾಂಗ್ರೆಸ್ ಪಾಲಿಗೆ “ಟ್ರಬಲ್ ಶೂಟರ್” ಎಂದೇ ಖ್ಯಾತರಾದವರು.
ಪಕ್ಷವು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲೆಲ್ಲಾ ತನ್ನ ಹಿತವನ್ನು ಬದಿಗಿರಿಸಿ ಪಕ್ಷವನ್ನು ಗೆಲುವಿನ ಪಥದತ್ತ ಮುನ್ನಡೆಸುವ ಧೀಮಂತ ವ್ಯಕ್ತಿತ್ವ ಇವರದ್ದು. ಅಧಿಕಾರ ಇರಲಿ ಇಲ್ಲದಿರಲಿ ಡಿ.ಕೆ. ಶಿವಕುಮಾರ್ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿರುತ್ತಾರೆ. ತನ್ನ ಮೂರುವರೆ ದಶಕಗಳ ರಾಜಕೀಯ ಜೀವನದುದ್ದಕ್ಕೂ ಪಕ್ಷವಹಿಸಿದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದ ಶ್ರೇಯಸ್ಸು ಇವರದ್ದಾಗಿದೆ. ಕಾಂಗ್ರೆಸ್ ಮಟ್ಟಿಗೆ ಡಿಕೆಶಿಯವರು ಎಂದೆಂದೂ ಆಪದ್ಬಾಂದರೆನ್ನಬೇಕು.
ರಾಜ್ಯದ ಕರಾವಳಿ ಪ್ರದೇಶ ಕಾಂಗ್ರೆಸ್ ಪಕ್ಷದ ಭದ್ರ ಬುನಾದಿಯ ನೆಲೆಯಾಗಿತ್ತು. ನಾನಾ ಕಾರಣಗಳಿಂದ ಕರಾವಳಿ ಭಾಗದಲ್ಲಿ ಕಾಂಗ್ರೆಸ್‍ನ ಹಿಡಿತ ಕಡಿಮೆಯಾಗತೊಡಗಿತು. ಕರಾವಳಿಯಲ್ಲಿ ಸಾಮರಸ್ಯ ಮೂಡಿಸುವುದರೊಂದಿಗೆ ಮತ್ತೆ ಕಾಂಗ್ರೆಸ್ ಪಕ್ಷವನ್ನು ಗತಕಾಲದ ಉಚ್ಚ್ರಾಯ ಸ್ಥಿತಿಗೆ ಕೊಂಡೊಯ್ಯುವ ಅವಶ್ಯಕತೆಯಿದೆ. ಇದೀಗ ರಾಜ್ಯದ ಚುಕ್ಕಾಣಿಯನ್ನು ಡಿಕೆಶಿ ವಹಿಸಿಕೊಳ್ಳುವ ಮೂಲಕ ಮತ್ತೆ ಕಾಂಗ್ರೆಸ್‍ನಲ್ಲಿ ಸಂಚಲನ ಮೂಡಿದೆ. ಕಾರ್ಯಕರ್ತರು ಹಾಗೂ ನಾಯಕರ ನಡುವೆ ಕ್ಷೀಣಿಸುವ ಬಾಂಧವ್ಯವನ್ನು ವೃದ್ದಿಸುವ ಸಾಮರ್ಥ್ಯ ಡಿಕೆಶಿ ಅವರಿಗಿದೆ.
ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಡಿ.ಕೆ. ಶಿವಕುಮಾರ್ ಹೊಂದಿರುವ ಸಂಪರ್ಕ ಹಾಗೂ ಅವರು ಗಳಿಸಿದ ಸಾಮರ್ಥ್ಯ ಒಂದು ದಿನದ ಸಾಧನೆಯೇನಲ್ಲ. ವಿದ್ಯಾರ್ಥಿ ದೆಸೆಯಲ್ಲಿದ್ದ ವೇಳೆ ಅವರು ರೂಡಿಸಿಕೊಂಡ ನಾಯಕತ್ವ ಗುಣ ಹಾಗೂ ಕಾರ್ಯಕರ್ತರಾಗಿದ್ದ ಕಾಲದಿಂದಲೂ ತೋರಿದ ಪಕ್ಷ ನಿಷ್ಠೆಯ ಫಲವಾಗಿ ಡಿಕೆಶಿಯವರಿಗೆ ಪಕ್ಷದ ಅಧ್ಯಕ್ಷಗಾಧಿ ಸಿದ್ಧಿಸಿದೆ. ಅವರು ರಾಜ್ಯಾಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ರಾಷ್ಟ್ರೀಯ ನಾಯಕರವರೆಗೂ ಅವರ ನಾಯಕತ್ವದ ಬಗ್ಗೆ ವಿಶ್ವಾಸ ಮೂಡಿದೆ. ಯುವ ಕಾರ್ಯಕರ್ತರ ಸಮೂಹದಲ್ಲೂ ಹೊಸ ಸಂಚಲನ ಮೂಡಿದೆ.
ಕಾಂಗ್ರೆಸ್‍ನ ಆಶಾಕಿರಣ:
ಗ್ರಾಮ ಪಂಚಾಯಿತಿನಿಂದ ಹಿಡಿದು ಲೋಕಸಭಾ ಚುನಾವಣೆಗಳವರೆಗೆ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಅಗ್ರಗಣ್ಯ ಪ್ರಚಾರಕ, ತನ್ನ ಹೋರಾಟದ ಮೂಲಕವೇ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪಣತೊಟ್ಟಿದ್ದಾರೆ. ಕಾಂಗ್ರೆಸಿನ ಆಶಾಕಿರಣವೂ ಹೌದು.
ಈ ಸಂದಿಗ್ಧ ಕಾಲ ಘಟ್ಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಿದೆ. ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ನೇಮಕವಾಗಿನಿಂದಲೇ ಪಕ್ಷದ ಸಂಘಟನೆಯ ಕೆಲಸ ಕಾರ್ಯಗಳನ್ನು ಡಿಕೆಶಿಯವರು ಆರಂಭಿಸಿದ್ದು. ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟವನ್ನು ನಡೆಸುತ್ತಲೇ ಬಂದಿದ್ದಾರೆ.
ತಳಮಟ್ಟದಿಂದಲೇ ಕಾಂಗ್ರೆಸ್ ಬೇರುಗಳನ್ನು ಮತ್ತೆ ಗಟ್ಟಿ ಮಾಡಲು ಹೊರಟಿದ್ದಾರೆ ಮಾತ್ರವಲ್ಲದೆ ಹಿರಿಯ ನಾಯಕರನ್ನು ಮುಖತಃ ಭೇಟಿಯಾಗಿ ಅವರ ಆಶೀರ್ವಾದದೊಂದಿಗೆ ಪಕ್ಷ ಸಂಘಟನೆಯ ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದಾರೆ. ಡಿಕೆಶಿಯವರ ಈ ನಡೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಆಶಾವಾದ ಮೂಡಿಸಿದೆ.
ರಾಜ್ಯದಲ್ಲಿ ಪ್ರಥಮ ಬಾರಿಗೆ ಡಿಜಿಟಲ್ ತಂತ್ರಜ್ಞಾನ ಬಳಸಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿರುವ ಡಿ.ಕೆ. ಶಿವಕುಮಾರ್ ಅಧ್ಯಕ್ಷ ಅವಧಿಯಲ್ಲಿ ಪಕ್ಷ ಸಮರ್ಥವಾಗಿ ಸಂಘಟನೆಯಾಗಲಿದ್ದು. ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ದಿನಗಳಲ್ಲಿ ಡಿಕೆಶಿ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಗಲಿ. ಪಕ್ಷ ತಳಮಟ್ಟದಿಂದ ಬೆಳೆಯಲಿ ಎಂಬುದೇ ನಮ್ಮ ಹಾರೈಕೆ.
????ಅಶೋಕ್ ಕುಮಾರ್ ಕೊಡವೂರು, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ