ಮಂಗಳೂರು: ಪೇಟೆ ಹೋದ ಯುವತಿಯೊಬ್ಬಳು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಬಿಳಿನೆಲೆ ಎಂಬಲ್ಲಿ ಶುಕ್ರವಾರ ನಡೆದಿದೆ.
ಬಿಳಿನೆಲೆ ಗ್ರಾಮದ ಮದಪರ್ಲದ ಭೋಜಪ್ಪ ಗೌಡ ಅವರ ಪುತ್ರಿ ಶುಭಲತಾ (16) ನಾಪತ್ತೆಯಾಗಿರುವ ಯುವತಿ.
ಪೇಟೆಗೆ ಹಾಲು ತರಲು ಹೋದವಳು ಮರಳಿ ಮನೆಗೆ ಬಂದಿಲ್ಲ ಎಂದು ಮನೆಯವರು ದೂರು ನೀಡಿದ್ದಾರೆ. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.