ಶಿಕ್ಷಕ, ಅಂಕಣಕಾರ ಟಿ. ದೇವಿದಾಸ್ ಅವರಿಗೆ ಗುರುಭೂಷಣ ಪ್ರಶಸ್ತಿ

ಮೈಸೂರು: ಕರ್ನಾಟಕ ರಾಜ್ಯ ಶಿಕ್ಷಕರ‌ ಪ್ರತಿಭಾ ಪರಿಷತ್ತು ನೀಡುವ ಗುರು ಭೂಷಣ ಪ್ರಶಸ್ತಿಗೆ ಶಿಕ್ಷಕ, ಅಂಕಣಕಾರ ಟಿ.‌ ದೇವಿದಾಸ್ ಅವರು ಆಯ್ಕೆಯಾಗಿದ್ದು, ಇಂದು (ನ. 27)ರಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ‌ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದೇವಿದಾಸ್ ಚಿಕ್ಕಮಗಳೂರು ಜಿಲ್ಲೆಯ ಸಂಗಮೇಶ್ವರ ಪೇಟೆಯಲ್ಲಿರುವ ಉಡುಪಿ‌ ಅದಮಾರು ಮಠ ಎಜ್ಯುಕೇಶನ್ ಕೌನ್ಸಿಲ್ ನಡೆಸುತ್ತಿರುವ ಪೂರ್ಣಪ್ರಜ್ಞಾ ಆಂಗ್ಲಮಾಧ್ಯಮ‌ ವಸತಿ ವಿದ್ಯಾಕೇಂದ್ರದಲ್ಲಿ ಕಳೆದ 21 ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‌

ಅಲ್ಲದೇ ಉತ್ತಮ ಬರಹಗಾರರಾಗಿದ್ದು, ವಿಶ್ವವಾಣಿ ಪತ್ರಿಕೆಯ ಅಂಕಣಕಾರರಾಗಿದ್ದಾರೆ. 5 ಕೃತಿಗಳನ್ನು ರಚಿಸಿರುವ ಇವರು‌ ಈ ಹಿಂದೆ ಚಿಕ್ಕಮಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು.

ಮೈಸೂರಿನಲ್ಲಿ‌ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೈಸೂರು ಶಾಸಕ ಜಿ.ಟಿ.ದೇವೇಗೌಡ, ಪ್ರೊ. ಎಂ. ಕೃಷ್ಣೇಗೌಡ, ಎಂಎಲ್ಸಿಗಳಾದ ಮರಿತಿಬ್ಬೇಗೌಡ, ನಾಡೋಜ ಮಹೇಶ್ ಜೋಷಿ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ.‌ಮಹೇಶ್ ಉಪಸ್ಥಿತರಿದ್ದರು.