ಇವರು ಬಿಡಿಸೋ ಪ್ರತೀ ಚಿತ್ರಗಳು ಸರಳ ಮತ್ತು ಸಹಜತೆಯಿಂದ ಗಮನಸೆಳೆಯುತ್ತದೆ. ಒಂದು ರೀತಿಯ ಕಲಾತ್ಮಕ ನೋಟಗಳಿಂದ ಖುಷಿಕೊಡುವಂತಿರುತ್ತದೆ. ಇವರ ಹೆಸರು ಸ್ವಾತಿ ಶೆಣೈ, ಊರು ಕಾರ್ಕಳ. ಮಂಡಲ ಆರ್ಟ್, ಬಾಟಲ್ ಆರ್ಟ್, ಲಿಡ್ ಆರ್ಟ್ ಮೊದಲಾದ ಕಲಾಕೃತಿಗಳು ಇವರ ಕೈಯಲ್ಲಿ ಆಗಾಗ ಅರಳುತ್ತವೆ.
“ನಂಗೆ ಬಾಲ್ಯದಿಂದಲೂ ಚಿತ್ರಕಲೆ ಎಂದರೆ ಅಪಾರ ಆಸಕ್ತಿ.ನಂಗೆ ಚಿತ್ರಕಲೆಗೆ ಗುರುಗಳಿಲ್ಲ. ಸ್ವಯಂ ಆಸಕ್ತಿಯಿಂದಲೇ, ಪ್ರೀತಿಯಿಂದ ಚಿತ್ರ ಬಿಡಿಸಲು ನಾನು ಶುರುಮಾಡಿದೆ.ನನ್ನ ಸ್ವಂತ ಆಲೋಚನೆ ಮತ್ತು ಕಲ್ಪನೆಗಳಿಂದ ಚಿತ್ರಗಳನ್ನು ಅರಳಿಸಿದೆ.
ಚಿತ್ರಕಲೆ ನನ್ನ ಬದುಕಿಗೆ ಖುಷಿ ಕೊಡುವ ಮತ್ತು ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ಮಾರ್ಗವೂ ಹೌದು” ಎನ್ನುತ್ತಾರೆ ಸ್ವಾತಿ.
ಸದ್ಯ ಸ್ವಾತಿ ಶೆಣೈ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ಓದುತ್ತಿದ್ದಾರೆ.