ಉಡುಪಿ: ಕನಸು ಕ್ರಿಯೇಷನ್ ನಡಿ ನಿರ್ಮಾಣಗೊಂಡ ‘ಪ್ರಾರಬ್ಧ’ ಕನ್ನಡ ಕಿರುಚಿತ್ರದ ಬಿಡುಗಡೆ ಸಮಾರಂಭ ಇಂದು ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ನಡೆಯಿತು.
ತುಳು ಚಿತ್ರರಂಗದ ನವರಸ ನಾಯಕ ಭೋಜರಾಜ್ ವಾಮಂಜೂರ್ ಅವರು ಕಿರುಚಿತ್ರವನ್ನು ಬಿಡುಗಡೆಗೊಳಿಸಿ ಚಿತ್ರ ತಂಡಕ್ಕೆ ಶುಭಹಾರೈಸಿದರು.
ಕಿರುಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ತುಳು ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಸೂರಜ್ ಶೆಟ್ಟಿ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಹರೀಶ್ ಕಾರ್ಕಳ, ಪ್ರಶಾಂತ್ ಹರಿಕಂಡಿಗೆ, ಶರತ್ ಕುಮಾರ್ ಭಂಡಾರಿ ಹಾಗೂ ಚಿತ್ರ ತಂಡದ ಸದಸ್ಯರು ಉಪಸ್ಥಿತರಿದ್ದರು.
ಈ ಕಿರುಚಿತ್ರಕ್ಕೆ ಶ್ರೀಶ ಎಳ್ಳಾರೆ ಅವರ ಕಥೆ ಹಾಗೂ ನಿರ್ದೇಶನವಿದೆ. ಶೃತಿನ್ ಎಸ್. ಶೆಟ್ಟಿ ಸಂಭಾಷಣೆ ಒದಗಿಸಿದ್ದು, ಸಹನಿರ್ದೇಶನ ಕೂಡ ಮಾಡಿದ್ದಾರೆ. ಛಾಯಾಗ್ರಹಣ ಹಾಗೂ ಸಂಕಲನ ಪ್ರಜ್ವಲ್ ಸುವರ್ಣ, ವಸ್ತ್ರಾಲಂಕಾರ ಅಭಿಲಾಶ್ ಪೂಜಾರಿ ದೆಂದೂರುಕಟ್ಟೆ, ಪೋಸ್ಟರ್ಸ್ ಡಿಸೈನ್ ಸುಹೈಲ್ ಮಾಡಿದ್ದಾರೆ.
ಇದೀಗ ಸಂಪೂರ್ಣ ಕಿರುಚಿತ್ರವು ಯೂಟ್ಯೂಬ್ ಕನಸು ಕ್ರಿಯೇಷನ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.