ಸೂಡಾ ಕೊರಾಜೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕಾರ್ಕಳ: ಬೆಳ್ಮಣ್ ಗ್ರಾ.ಪಂ.ವ್ಯಾಪ್ತಿಯ ಸೂಡಾ ಗ್ರಾಮದ ಸೂಡಾ ಕೊರಾಜೆಯಲ್ಲಿ 10 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಆಸ್ಕರ್ ಫೆರ್ನಾಂಡಿಸ್ ಅವರ ಆಪ್ತ ಕಾರ್ಯದರ್ಶಿ ನಾಗೇಶ್ ಉದ್ಯಾವರ ಇವರು ನ.  ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ  ಶಿರ್ವ ಜಿ.ಪಂ. ಸದಸ್ಯರಾದ ವಿಲ್ಸನ್ ರೇಡ್ರಿಗಸ್, ತಾ.ಪಂ ಮಾಜಿ ಸದಸ್ಯರಾದ  ಕ್ಸೇವಿಯರ್ ಡಿಮೆಲ್ಲೊ,ಮಾಜಿ ಗ್ರಾ.ಪಂ ಸದಸ್ಯರಾದ ಶಂಕರ್ ಕುಂದರ್,ಜೀರಿ ಎಲ್ ಡಿಸೋಜ, ವಾರಿಜಾ ಪೂಜಾರಿ,ಗಣೇಶ್ ಶೆಟ್ಟಿ, ಸತೀಶ ಪೂಜಾರಿ, ಸ್ಥಳೀಯರಾದ ಮೆಲ್ವಿನ್ ಕಾಸ್ತೆಲಿನೊ, ಅನಿತಾ ಕಾಸ್ತೆಲಿನೊ, ಜಗನ್ನಾಥ ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು.