ಕೋಟ: ಕಸಕ್ಕೆ ಬೆಂಕಿ ಹಾಕುವ ಸಂದರ್ಭದಲ್ಲಿ ವೃದ್ಧೆಯೊಬ್ಬರು ಬೆಂಕಿಗೆ ಆಹುತಿ ಆದ ಘಟನೆ ಮಣೂರು ಜಟ್ಟಿಗೇಶ್ವರ ಎಂಬಲ್ಲಿ ಸಂಭವಿಸಿದೆ.
ಮಣೂರು ಜಟ್ಟಿಗೇಶ್ವರದ ನಿವಾಸಿ ಬಾಗಿ (68) ಮೃತ ದುರ್ದೈವಿ. ಇವರು ಬೆಳಿಗ್ಗೆ ತನ್ನ ಮನೆಯ ವಠಾರದಲ್ಲಿದ್ದ ಕಸಗಟ್ಟಿಗಳನ್ನು ಒಗ್ಗೂಡಿಸಿ ಬೆಂಕಿ ಹಾಕುವ ವೇಳೆ ಸೀರೆಗೆ ಬೆಂಕಿ ತಾಗಿ ಇಡೀ ದೇಹಕ್ಕೆ ಬೆಂಕಿ ಹತ್ತಿಕೊಂಡಿದೆ. ಇದರಿಂದ ಆಘಾತಕ್ಕೊಳಗಾದ ಬಾಗಿ ಅವರು, ಅಸ್ವಸ್ಥಗೊಂಡು ಬೆಂಕಿಯ ರಾಶಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ತೀವ್ರ ಸ್ವರೂಪದ ಸುಟ್ಟಗಾಯವಾಗಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.