ಕಾರ್ಕಳ: ಇರ್ವತ್ತೂರು ಸಾರ್ವಜನಿಕ ಹಿಂದೂ ರುದ್ರಭೂಮಿಗೆ ತಂಗುದಾನ ಮತ್ತು ದಾಸ್ತಾನು ಕೊಠಡಿಯನ್ನು ಮಾಜಿ ಶಾಸಕ ದಿ. ಎಚ್. ಗೋಪಾಲ ಭಂಡಾರಿಯವರ ಇರ್ವತ್ತೂರು ಅಭಿಮಾನಿಗಳು ನಿರ್ಮಿಸಿಕೊಟ್ಟಿದ್ದು, ಅದರ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು.
ಅವಲಿನ್ ಲೂಯಿಸ್ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಅಧ್ಯಾಪಕ ರಮಾನಂದ ಶೆಣೈ ಕೊಠಡಿ ಹಸ್ತಾಂತರ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಕಾರ್ಕಳದ ಉದ್ಯಮಿ ವಿವೇಕ್ ಶೆಣೈ, ಮುಖಂಡರಾದ ಶ್ರೀನಿವಾಸ್ ಭಟ್, ಉಮಾನಾಥ್ ಶೆಣೈ, ಇಬ್ರಾಹಿಂ, ಗೋಪಾಲ್ ಪೂಜಾರಿ, ಮಾಜಿ ಪಂಚಾಯತ್ ಸದಸ್ಯರು ಚಂದ್ರರಾಜ ಅಧಿಕಾರಿ, ಉದಯ ಆಚಾರ್ಯ, ರೇವತಿ ಕುಲಾಲ್, ಇರ್ವತ್ತೂರು ಕಾಂಗ್ರೆಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ಹಾಗೂ ಗೋಪಾಲ್ ಭಂಡಾರಿ ಅವರ ಇರ್ವತ್ತೂರಿನ ಅಭಿಮಾನಿಗಳು ಉಪಸ್ಥಿತರಿದ್ದರು. ಜಯ ಕುಲಾಲ್ ಕಾರ್ಯಕ್ರಮ ಸಂಯೋಜಿಸಿದರು.