ಬೆಂಗಳೂರು: ಮೂವರು ಮಕ್ಕಳನ್ನು ನೇಣು ಬಿಗಿದು ಬಳಿಕ ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಬೆಂಗಳೂರಿನ ಮೈಕೋ ಲೇಔಟ್ ನ ರಮಣಶ್ರೀ ಎನ್ ಕ್ಲೇವ್ ಬಳಿ ಶುಕ್ರವಾರ ನಡೆದಿದೆ.
ಮೈಕೋ ಲೇಔಟ್ ನಿವಾಸಿ ಜನಕರಾಜ್ ಬಿಸ್ತಾ (32) ಆತ್ಮಹತ್ಯೆ ಮಾಡಿಕೊಂಡ ತಂದೆ. ಈತ ತನ್ನ ಮಕ್ಕಳಾದ ಸರಸ್ವತಿ (14), ಹೇಮತಿ (11) ಹಾಗೂ ಮೂರು ವರ್ಷದ ರಾಜ್ ಕುಮಾರ್ ಮಗುವಿಗೆ ನೇಣು ಬಿಗಿದು. ಬಳಿಕ ಈತನು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈತ ರಮಣಶ್ರೀ ಎನ್ ಕ್ಲೇವ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಎರಡು ತಿಂಗಳ ಹಿಂದಷ್ಟೇ ಜನಕರಾಜ್ ಅವರ ಪತ್ನಿ ನಂದಾದೇವಿ ಆತ್ಮಹತ್ಯೆಗೆ ಶರಣಾಗಿದ್ದರು.
ಆದ್ದರಿಂದ ಮಕ್ಕಳನ್ನು ನೋಡಿಕೊಳ್ಳಲಾರದೇ ಜೀವನದಲ್ಲಿ ಜುಗುಪ್ಸೆಗೊಂಡು ಜನಕರಾಜ್ ತಮ್ಮ ಮಕ್ಕಳನ್ನು ನೇಣಿಗೆ ಹಾಕಿ ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.