ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಭಿನಯ ಎಸ್. ಶೆಟ್ಟಿಗೆ ಅಜೆಕಾರು ಚರ್ಚ್ ಆಂಗ್ಲ ಮಾಧ್ಯಮ ಶಾಲೆಯಿಂದ ಅಭಿನಂದನೆ

ಅಜೆಕಾರು: 2020ನೇ ಸಾಲಿನ ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಜೆಕಾರು ಚರ್ಚ್ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿನಿ ಅಭಿನಯ ಎಸ್. ಶೆಟ್ಟಿ ಅವರಿಗೆ ಶಾಲೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಶಾಲಾ ಸಂಚಾಲಕ ಸುನೀಲ್ ಡಿಸಿಲ್ವ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಂಶುಪಾಲ ಸ್ಟ್ಯಾನಿ ಡಿಕುನ್ನ , ಸಿಸ್ಟರ್ ಅನಿತಾ, ಚರ್ಚ್ ಪಾಲನಾ ಮಂಡಳಿಯ ಸದ್ಯಸರು, ಶಾಲಾ ಆಡಳಿತ ಮಂಡಳಿಯ ಸದ್ಯಸರು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು, ಶಾಲಾ ಶಿಕ್ಷಕ ಶಿಕ್ಷಕಿಯರು ಹಾಗೂ ಅಭಿನಯ ತಂದೆ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.

ವಿಜೇತ ರಾಣಿ ಕಾರ್ಯಕ್ರಮ ನಿರೂಪಿಸಿದರು. ಲವೀನಾ ಬರ್ಬೋಜ ವಂದಿಸಿದರು.