ಹರಿದ್ವಾರದ ಪತಂಜಲಿ ಯೋಗಪೀಠಕ್ಕೆ ಪೇಜಾವರ ಶ್ರೀಗಳಿಂದ ಭೇಟಿ

ಹರಿದ್ವಾರ: ಯೋಗಗುರು ಬಾಬಾ ರಾಮ್ ದೇವ್ ಸಾರಥ್ಯದ ಹರಿದ್ವಾರದ ಜಗತ್ಪಸಿದ್ಧ ಪತಂಜಲಿ ಯೋಗ ಪೀಠಕ್ಕೆ ಸೋಮವಾರ ಪೇಜಾವರ ಶ್ರೀಗಳು ಭೇಟಿ ನೀಡಿದರು.

ಪತಂಜಲಿ ಆಯುರ್ವೇದ ಆಸ್ಪತ್ರೆ , ಆಯುರ್ವೇದ ವನ , ಪತಂಜಲಿ ಪೀಠದ ಉತ್ಮನ್ನ ಗಳ ಮಳಿಗೆ ಮೊದಲಾದ ಎಲ್ಲ ವಿಭಾಗಗಳನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿ ಅತೀವ ಸಂತಸ ವ್ಯಕ್ತಪಡಿಸಿದರು.

ಬಳಿಕ ರಾಮ್ ದೇವ್ ಬಾಬಾ ಹಾಗೂ ಆಚಾರ್ಯ ಬಾಲಕೃಷ್ಣರು ಶ್ರೀಗಳನ್ನು ಗೌರವಿಸಿದರು. ಶ್ರೀಗಳನ್ನು ರಾಮ್ ದೇವ್ ಅವರು ಗೌರವಿಸಿದರು.

ಶ್ರೀವಿಶ್ವೇಶತೀರ್ಥ ಶ್ರೀಪಾದರನ್ನು ರಾಮ್ ದೇವ್ ವಿಶೇಷವಾಗಿ ಸ್ಮರಿಸಿದರು.‌ ಡಾ. ಲಲಿತ್ ಮೋಹನ್ ಮಿಶ್ರಾ ಪತಂಜಲಿ ಯೋಗ ಪೀಠದ ಎಲ್ಲ ವಿಭಾಗಗಳನ್ನು ಶ್ರೀಗಳಿಗೆ ಪರಿಚಯಿಸಿದರು. ಶ್ರೀಗಳ ಶಿಷ್ಯರು, ಆಪ್ತ ಕಾರ್ಯದರ್ಶಿ ಲಗಳು ಉಪಸ್ಥಿತರಿದ್ದರು.