ಹಿರಿಯಡಕ: ಕಡಿದ ಮರ ಹಣೆಗೆ ಬಡಿದು ವ್ಯಕ್ತಿ ಮೃತ್ಯು

ಹಿರಿಯಡಕ: ಮರ ಕಡಿಯುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಡಿದ ಮರ ಹಣೆಗೆ ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹಿರಿಯಡಕ ಬೊಮ್ಮಾರಬೆಟ್ಟು ಎಂಬಲ್ಲಿ ಭಾನುವಾರ ನಡೆದಿದೆ.

ಹಿರಿಯಡಕ ಬೊಮ್ಮಾರಬೆಟ್ಟು ಗ್ರಾಮದ ಕೊಂಡಾಡಿ ನಿವಾಸಿ ಸುಂದರ ಹರಿಜನ (57) ಎಂಬುವವರು ಮೃತ ದುರ್ದೈವಿ. ಇವರು‌ ಸಂತೋಷ ಪೂಜಾರಿ ಎಂಬುವವರ ಕಂಟ್ರ್ಯಾಕ್ಟರಿನಲ್ಲಿ ಮರ ಕಡಿಯುವ ಕೆಲಸ ಮಾಡಿಕೊಂಡಿದ್ದರು.

ಭಾನುವಾರ (ನ.1) ಬೆಳಿಗ್ಗೆ 10 ಗಂಟೆಗೆ ವೇಳೆಗೆ ಬೊಮ್ಮಾರಬೆಟ್ಟು ಗ್ರಾಮದ ಮಾಣೈ ಕೃಷ್ಣ ನಾಯ್ಕ ಅವರ ಮನೆಯ ಬಳಿ ಇರುವ ಮರವನ್ನು ಕಡಿಯುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕಡಿಯುತ್ತಿದ್ದ ಮರವು ಇನ್ನೊಂದು ಮರದ ಮೇಲೆ ಬಿದ್ದು, ಕಡಿಯುತ್ತಿದ್ದ ಮರದ ಬುಡವು ಹಿಂದಕ್ಕೆ ಜಾರಿ ಸುಂದರ ಅವರ ಹಣೆಗೆ ಬಡಿದಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಸುಂದರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮಗ ಹರೀಶ್ ನೀಡಿದ ದೂರಿನಂತೆ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.