ಅಥ್ಲಿಟಿಕ್ ಕಾರ್ಕಳದ ಅಭಿನಯ ಶೆಟ್ಟಿ ಸಹಿತ ಎಂಟು ಮಂದಿಗೆ 2019ನೇ ಸಾಲಿನ ಏಕಲವ್ಯ ಪ್ರಶಸ್ತಿ

ಚಿಕ್ಕಮಗಳೂರು: ಕಾರ್ಕಳ ಕುಕ್ಕುಜೆಯ ಅಭಿನಯ ಶೆಟ್ಟಿ (ಅಥ್ಲಿಟಿಕ್‌) ಸೇರಿದಂತೆ ಒಟ್ಟು ಎಂಟು ಮಂದಿ 2019ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಖುಷಿ ದಿನೇಶ್‌ (ಈಜು), ಮಯಾಂಕ್ ಅಗರ್‌ಗವಾಲ್ (ಕ್ರಿಕೆಟ್‌), ಪುನೀತ್ ನಂದಕುಮಾರ್ (ಪ್ಯಾರಾ ಈಜು), ಚಿಕ್ಕಮಗಳೂರು ಜಿಲ್ಲೆಯ ವೇದಾ ಕೃಷ್ಣಮೂರ್ತಿ(ಕ್ರಿಕೆಟ್‌), ಉಡುಪಿ ಜಿಲ್ಲೆಯ ಅಭಿನಯ ಶೆಟ್ಟಿ (ಅಥ್ಲಿಟಿಕ್‌), ದಕ್ಷಿಣ ಕನ್ನಡ ಜಿಲ್ಲೆಯ ಅಭಿಷೇಕ ಎನ್.ಶೆಟ್ಟಿ (ಅಥ್ಲಿಟಿಕ್ಸ್‌),  ಬಾಗಲಕೋಟೆ ಜಿಲ್ಲೆಯ ವೆಂಕಪ್ಪ ಕೆಂಗಲಗುತ್ತಿ (ಸೈಕ್ಲಿಂಗ್), ಕೊಡಗು ಜಿಲ್ಲೆಯ ಪುಲಿಂದ ಲೋಕೇಶ್ ತಿಮ್ಮಣ್ಣ (ಹಾಕಿ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.