ಮಣಿಪಾಲದ ಈ ಯುವ ಕಲಾವಿದೆಯ ಕೈಯಲ್ಲಿ ಕಸವೂ ರಸವಾಗುತ್ತೆ: ಇವರಿಗೆ ಪಾಟ್ ಪೈಂಟಿಂಗ್,ಬಾಟಲ್ ಪೈಂಟಿಂಗ್ ಮಾಡೋದಂದ್ರೆ ನೀರು ಕುಡಿದಷ್ಟೇ “ಸುಲಭ”

ಪಾಟ್ ಪೈಂಟಿಂಗ್, ಬಾಟಲ್ ಆರ್ಟ್ ಮಾಡೋದು ಅಂದ್ರೆ ಮಣಿಪಾಲದ ಈ ಯುವ ಕಲಾವಿದೆಗೆ ನೀರು ಕುಡಿದಷ್ಟೇ ಸುಲಭ, ಇವರ ಹೆಸರೂ ಕೂಡ ಸುಲಭ. ಹೌದು ಇವರು ಸುಲಭ ಭಟ್.

ಮಣ್ಣಿನ ಪಾಟ್ ಗಳು, ವೇಸ್ಟ್ ಬಾಟಲ್‌ಗಳನ್ನು ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿ ಮನೆಯಲ್ಲಿಟ್ಟರೆ ಅದರ ಚಂದಾನೇ ಬೇರೆ. ಇಂತಹ ಮಣ್ಣಿನ ಪಾಟ್‌ಗಳಿಗೆ ರಂಗು ಬಳಿದು ಅದನ್ನು ಅಂದಗಾಣಿಸುವುದು ಇವರ ನೆಚ್ಚಿನ ಹವ್ಯಾಸ.

ಸಹಜ ಮತ್ತು ಸರಳವಾಗಿ ಕಾಣುವ ಇವರ ಕಲಾಕೃತಿಗಳು ಸುಂದರ ಮನೆಗೆ ಇನ್ನಷ್ಟು ಆಪ್ತವಾಗಿಸುತ್ತದೆ.

 “ಲಾಕ್‌ಡೌನ್ ಟೈಮ್‌ನಲ್ಲಿ ಅಮ್ಮನ ಮನೆಗೆ ಬಂದಾಗ ನನ್ನನ್ನು ನಾನು ಬ್ಯುಸಿಯಾಗಿರಿಸೋದಕ್ಕೆ ನಾನು ಆರಿಸಿಕೊಂಡ ಕೆಲಸವಿದು. ಮೊದಲಿಗೆ ಮನೆಯಲ್ಲಿದ್ದ ಹಳೆ ಕಾಲದ ಮಡಕೆ ಪಾಟ್‌ಗಳಿಗೆ ಬಣ್ಣ ಬಳಿದು ಅದನ್ನ ಸುಂದರವಾದ ಹೂಕುಂಡವನ್ನಾಗಿ ಮಾಡಿ ಗಿಡವನ್ನು ನೆಟ್ಟೆ. ಒಂದೊಂದೇ ಮಾಡುತ್ತಾ ಹೋದಂತೆ ಇನ್ನೂ ಹೊಸತೇನಾದ್ರೂ ಮಾಡೋಣವೆನಿಸಿತು. ಹಳೆಯ ಬಾಟಲಿಗಳಿಗೆ ಸೆಣಬಿನ ದಾರದಿಂದ ಅಲಂಕಾರವನ್ನು ಮಾಡಿ ವಾಸ್ ಮಾಡಿದೆ ಅದು ಕೂಡ ಚೆನ್ನಾಗಿ ಬಂತು. ಈಗ ಇವೆಲ್ಲವೂ ನಮ್ಮ ಹೊಸ ಮನೆಯ ಶೋಕೇಸ್ ನಲ್ಲಿ ಜಾಗ ಪಡೆದಿದ್ದು, ಮನೆಗೇ ಒಂದು ಶೋಭೆ ನೀಡಿವೆ” ಎಂದು ಖುಷಿಯಿಂದ ಹೇಳುವ ಸುಲಭಾ ಭಟ್ ಅವರ ಮಾತಲ್ಲಿ ಇನ್ನೂ ಈ ಕ್ಷೇತ್ರದಲ್ಲಿ ಹೊಸತೇನಾದ್ರೂ ಮಾಡಬೇಕು ಅನ್ನೋ ದೃಢತೆ ಇದೆ.

(“ಚಿತ್ರ ಶಾಲೆ”ಉಡುಪಿ XPRESS  ನ ಹೊಸ ಅಂಕಣ. ಹೊಸ ಯುವ ಕಲಾವಿದರ ಕಲಾಕೃತಿ ಮತ್ತು ಅವರ ಕಿರು ಪರಿಚಯವನ್ನು ಲೋಕಕ್ಕೆ ತಿಳಿಸುವ ಪ್ರಯತ್ನವಿದು. ನಿಮ್ಮ ಕಲಾಕೃತಿಗಳನ್ನು ನಿಮ್ಮ ಕಿರು ಪರಿಚಯದೊಂದಿಗೆ ನಮಗೆ ಕಳಿಸಬಹುದು.ನಿಮ್ಮ ಸ್ನೇಹಿತರ ವಲಯದಲ್ಲೂ ಯಾರಾದರೂ ಕಲಾವಿದರಿದ್ದರೆ ಅವರಿಗೆ ಗೊತ್ತಾಗದ ಹಾಗೆ ಅವರ ಕುರಿತು ಮಾಹಿತಿ ನಮಗೆ ನೀಡಿ ಅವರಿಗೆ ಸರ್ ಪ್ರೈಜ್ ಕೊಡಬಹುದು. ನಮ್ಮ ವಾಟ್ಯ್ಸಾಪ್-7483419099  ಇ-ಮೇಲ್: [email protected])